Home » ಅರಣ್ಯ ಸಿಬ್ಬಂದಿಗಳೇ, ಕೇಂದ್ರ ಸರ್ಕಾರ ನೀಡಿದೆ ನಿಮಗೊಂದು ‘ಗುಡ್ ನ್ಯೂಸ್’ !

ಅರಣ್ಯ ಸಿಬ್ಬಂದಿಗಳೇ, ಕೇಂದ್ರ ಸರ್ಕಾರ ನೀಡಿದೆ ನಿಮಗೊಂದು ‘ಗುಡ್ ನ್ಯೂಸ್’ !

by Mallika
0 comments

ಅರಣ್ಯ ಸಿಬ್ಬಂದಿಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಅರಣ್ಯ ಸಿಬ್ಬಂದಿಗಳಿಗೂ ರಾಷ್ಟ್ರಪತಿ ಪದಕ ಸೇರಿದಂತೆ ಸಮಾನ ವೇತನ ಸೌಲಭ್ಯ ನೀಡಲು ಉನ್ನತ ಮಟ್ಟದ ಸಮಿತಿ ಶಿಫಾರಸ್ಸು ಮಾಡಿದ್ದು, ಇದು ಅಂಗೀಕಾರವಾಗುವ ನಿರೀಕ್ಷೆಯಿದೆ.

ಅರಣ್ಯ ಇಲಾಖೆಯ ಅಭಿವೃದ್ಧಿ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಕೇಶವ ವರ್ಮಾ ನೇತೃತ್ವದ ಸಮಿತಿಯು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಇತರೆ ಸಮವಸ್ತ್ರ ಸೇವೆಯಲ್ಲಿರುವ ಸರ್ಕಾರಿ ನೌಕರರಂತೆ ಯೋಗ್ಯ ಸಂಬಳ ಸರ್ಕಾರಿ ಸವಲತ್ತು ನೀಡಬೇಕೆಂದು ಶಿಫಾರಸ್ಸು ಮಾಡಿದೆ.

ಪ್ರತಿ ವರ್ಷ ವೈದ್ಯಕೀಯ ಚಿಕಿತ್ಸೆ, ರೇಷನ್, ಗೃಹ ಬಳಕೆ ವಸ್ತುಗಳಿಗೆ ಸಬ್ಸಿಡಿ ನೀಡುವುದು, ಕರ್ತವ್ಯದ ವೇಳೆ ಮೃತಪಟ್ಟರೆ ಪರಿಹಾರ ನೀಡಬೇಕೆಂದೂ ಸಹ ಶಿಫಾರಸ್ಸು ಮಾಡಲಾಗಿದ್ದು, ಇದಕ್ಕೆ ಅಂಗೀಕಾರ ದೊರೆಯುವ ಸಾಧ್ಯತೆ ಇದೆ.

You may also like

Leave a Comment