Home » Dakshina Kannada: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ನಾಪತ್ತೆ: ಸೇತುವೆ ಮೇಲೆ ಮುಮ್ತಾಜ್ ಅಲಿ ಕಾರು ಪತ್ತೆ!

Dakshina Kannada: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ನಾಪತ್ತೆ: ಸೇತುವೆ ಮೇಲೆ ಮುಮ್ತಾಜ್ ಅಲಿ ಕಾರು ಪತ್ತೆ!

0 comments

Dakshina Kannada: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಅವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಹುಡುಕಾಟ ನಡೆಸುತ್ತಿದ್ದ ವೇಳೆ ಮಂಗಳೂರಿನ (Dakshina Kannada) ಕುಳೂರಿನ ಸೇತುವೆ ಮೇಲೆ ಮುಮ್ತಾಜ್ ಅಲಿ ಕಾರು ಪತ್ತೆಯಾಗಿದ್ದು ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ.

ಮಾಹಿತಿ ಪ್ರಕಾರ, ವಿವಿಧ ಉದ್ಯಮ ಮತ್ತು ಮಸೀದಿ ಕಮಿಟಿಗಳಲ್ಲಿ ಅವರು ತೊಡಗಿಸಿಕೊಂಡಿದ್ದ ಮುಮ್ತಾಜ್ ಅಲಿ, ಬೆಳಗ್ಗೆ ಮೂರು ಗಂಟೆಗೆ ಮನೆಯಿಂದ ಹೊರಟ್ಟಿದ್ದ ಅವರು ನಾಪತ್ತೆಯಾಗಿದ್ದಾರೆ.

ಇದೀಗ ಕಾರು ಮುಕ್ಕಾಲು ಭಾಗ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಮುಮ್ತಾಜ್ ಅಲಿ ಅವರ ಬಿಎಂಡಬ್ಲೂ ಕಾರು ಪತ್ತೆಯಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು ಕಮೀಷನರ್ ಮುಂದೆ ಮೊಯಿದ್ದೀನ್ ಬಾವ ಕಣ್ಣೀರು ಹಾಕಿದ್ದಾರೆ.

ಕಾರು ಸೇತುವೆ ಬಳಿ ಪತ್ತೆಯಾದ ಹಿನ್ನಲೆಯಲ್ಲಿ. ಅವರು ನೀರಿಗೆ ಹಾರಿರಬಹುದು ಅಥಾವ ಯಾರದರೂ ಅಪಘಾತ ಮಾಡಿ ಎಸೆದಿರಬಹುದು ಎಂಬ ಶಂಕೆಯಲ್ಲಿ, ಸದ್ಯ ಕಾರು ಪತ್ತೆಯಾದ ಬೆನ್ನಲ್ಲೇ ನದಿಯಲ್ಲಿ ಎಸ್ ಡಿ ಆರ್ ಎಫ್,ಎನ್ ಡಿ ಆರ್ ಎಫ್,ಅಗ್ನಿಶಾಮಕದಳದಿಂದ ಮುಮ್ತಾಜ್ ಅಲಿ ಅವರನ್ನು ಹುಡುಕಾಟ ನಡೆಸುತ್ತಿದೆ.

You may also like

Leave a Comment