10
Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವರೋರ್ವರು ಓರ್ವ ಮಾಜಿ ರೌಡಿಶೀಟರ್ ಹಾಗೂ ದೇವಸ್ಥಾನಕ್ಕೆ ದ್ರೋಹ ಬಗೆದು ಜೈಲಿನಲ್ಲಿದ್ದವನ ಹೆಸರನ್ನು ಶಿಫಾರಸ್ಸು ಮಾಡಿರುವುದಾಗಿ ಟಿವಿ9 ವರದಿ ಮಾಡಿದೆ.
ಗ್ರಾಮ ಪಂಚಾಯತಿ ಸದಸ್ಯ ಕಾಂಗ್ರೆಸ್‌ನ ಹರೀಶ್ ಇಂಜಾಡಿ ಎಂಬಾತ ಸದಸ್ಯ ಸ್ಥಾನ ನೀಡಬೇಕು ಎಂದು ಹೇಳಿದ್ದು, ಇವರು ಓರ್ವ ರೌಡಿಶೀಟರ್ ಆಗಿದ್ದು, ದೇವಸ್ಥಾನದ ಆವರಣದಲ್ಲಿ ಇವರ ಅಂಗಡಿ ಮಳಿಗೆಗಳು ಇದೆ. ದೇವಸ್ಥಾನದ ಹಣ್ಣುಕಾಯಿ ಮಳಿಗೆಗಳ ಟೆಂಡರ್‌ನಲ್ಲಿ ನಕಲಿ ಚೆಕ್ ನೀಡಿ ದೇವಸ್ಥಾನಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹರೀಶ್ ಜೈಲು ಸೇರಿದ್ದರು.
ಈತನ ಶಿಫಾರಸ್ಸಿಗೆ ತೀರ್ವ ವಿರೋಧ ವ್ಯಕ್ತವಾಗಿದೆ.
