Mangalore Suicide Case : ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯ ಕರುಣಾ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮೈಸೂರು ಮೂಲದ ದೇವೇಂದ್ರಪ್ಪ ಹಾಗೂ ಅವರ ಪತ್ನಿ,ಇಬ್ಬರೂ ಹೆಣ್ಣುಮಕ್ಕಳು ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿದ್ದರು.
ಶುಕ್ರವಾರ ಬೆಳಗ್ಗೆ ನಾಲ್ವರೂ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಕುಟುಂಬ ಮಾ.27ಕ್ಕೆ ಹೊಟೇಲ್ ನಲ್ಲಿ ರೂಂ ಪಡೆದಿದ್ದು ನಿನ್ನೆ ಸಂಜೆ ಹೊರಡಬೇಕಿತ್ತು. ಆದರೆ ಹೊರಗೆ ಬರದೇ ಇರುವುದರಿಂದ, ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ನೋಡಿದಾಗ ಸಾವನ್ನಪ್ಪಿರುವುದು ಕಂಡುಬಂದಿದೆ. ಮೃತರನ್ನು ದೇವೇಂದ್ರ(48), ಪತ್ನಿ ನಿರ್ಮಲಾ (45), ಅವಳಿ ಹೆಣ್ಮಕ್ಕಳಾದ ಚೈತ್ರಾ ಮತ್ತು ಚೈತನ್ಯ ಮೃತರು ಎಂದು ಗುರುತಿಸಲಾಗಿದೆ.
ಮೈಸೂರಿನ ವಾಣಿ ವಿಲಾಸ ಬಡಾವಣೆಯ ದೇವೇಂದ್ರ (48), ಎಂಬುವವರು ತಮ್ಮ ಅವರ ಪತ್ನಿ ಮತ್ತು ಇಬ್ಬರು ಅವಳಿ ಹೆಣ್ಮಕ್ಕಳ ಜೊತೆ ಸಾವು ಕಂಡಿದ್ದಾರೆ. ಹೆಂಡ್ತಿ ಮಕ್ಕಳಿಗೆ ವಿಷವುಣಿಸಿ ದೇವೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಮಂಗಳೂರಿನ ಕೆ.ಎಸ್ ರಾವ್ ರಸ್ತೆಯ ಕರುಣಾ ಲಾಡ್ಜ್ ನಲ್ಲಿ ಕೃತ್ಯ ನಡೆದಿದೆ.
ಈ ಘಟನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಸಾಲ ಇರುವುದರಿಂದ ಮನ ನೊಂದು ಆತ್ಮಹತ್ಯೆ
ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟಿಸಿದೆ.
ಸ್ಥಳಕ್ಕೆ ಮಂಗಳೂರು ಕಮಿಷನ ಕುಲದೀಪ್ ಜೈನ್
ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಬಂದರು ಠಾಣೆ
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
