Home » Mangaluru : ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ – 7ನೇ ಸಲ ಅಡವಿಡಲು ಬಂದಾಗ ಸಿಕ್ಕಿಬಿದ್ದ ಖತರ್ನಾಕ್ ಮಹಿಳೆ !!

Mangaluru : ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ – 7ನೇ ಸಲ ಅಡವಿಡಲು ಬಂದಾಗ ಸಿಕ್ಕಿಬಿದ್ದ ಖತರ್ನಾಕ್ ಮಹಿಳೆ !!

236 comments

Mangaluru : ಮಹಿಳೆ ಒಬ್ಬರು ಬ್ಯಾಂಕಿಗೆ ಬಂದು ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುತ್ತಿದ್ದು, ಏಳನೇ ಬಾರಿ ಆಕೆ ಬ್ಯಾಂಕಿಗೆ ಬಂದು ಚಿನ್ನವನ್ನು ಅಡವಿಡುವಾಗ ಆಕೆ ಬ್ಯಾಂಕಿನಲ್ಲಿ ಇದುವರೆಗೂ ಇಟ್ಟ ಚಿನ್ನವೆಲ್ಲ ನಕಲಿ ಎಂದು ತಿಳಿದುಬಂದ ಅಚ್ಚರಿ ಪ್ರಕರಣ ಒಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ(Mangaluru ) ಇಂತಹ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಬಗ್ಗೆ ಮಂಗಳೂರಿನ ವೆಲೆನ್ಸಿಯಾ ಕೆನರಾ ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಲ್ಲಿ ಮಹಿಳೆಯೊಬ್ಬರು ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಬಗ್ಗೆ ಉಲ್ಲೇಖಸಿದ್ದಾರೆ.

ಪ್ರಭಾವತಿ ಪ್ರಭು ಎಂಬುವರು ಈ ರೀತಿ ವಂಚಿಸಿದ ಮಹಿಳೆಯಾಗಿದ್ದಾರೆ. ಅವರು 2024ರ ಅ. 22ರಂದು 1.40 ಲ.ರೂ., ಅ. 25ರಂದು 1.41 ಲ.ರೂ., ನ. 21ರಂದು 1.44 ಲ.ರೂ., ನ. 25ರಂದು 1.46 ಲ.ರೂ., ನ. 29ರಂದು 2.98 ಲ.ರೂ. ಡಿ. 3ರಂದು 2.96 ಲ.ರೂ. ಸಾಲ ಪಡೆದುಕೊಂಡಿದ್ದರು.

ಅಪ್ರೈಸರ್‌ ಆಗಿದ್ದ ಹರೀಶ್‌ ರಾಜ್‌ ಚಿನ್ನಾಭರಣಗಳನ್ನು ಪರಿಶೀಲಿಸಿದ್ದರು. ಡಿ. 6ರಂದು ಪ್ರಭಾವತಿ ಮತ್ತೆ ಚಿನ್ನಾಭರಣ ಅಡವಿಡಲು ಬಂದಾಗ ಈ ಹಿಂದೆ ಅಪ್ರೈಸರ್‌ ಆಗಿದ್ದ ಹರೀಶ್‌ ರಾಜ್‌ ಇರಲಿಲ್ಲ. ಹಾಗಾಗಿ ರಾಜೇಶ್‌ ಎಂಬವರನ್ನು ಕರೆಸಿ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂದು ಗೊತ್ತಾಗಿದೆ. ಬಳಿಕ ಪ್ರಭಾವತಿ ಹಿಂದೆ ಅಡವಿಟ್ಟಿದ್ದ ಆಭರಣಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿಯಾಗಿದ್ದವು. ಈ ಕುರಿತು ಇದೀಗ ಮಂಗಳೂರು ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ಬಗ್ಗೆ ಪ್ರಭಾವತಿ ಅವರನ್ನು ಬ್ಯಾಂಕ್‌ ಮ್ಯಾನೇಜರ್‌ ಪ್ರಶ್ನಿಸಿದಾಗ ಚಿನ್ನಾಭರಣ ಸಂಬಂಧಿ ಸುನೀಲ್‌ ಅವರದಾಗಿದ್ದು, ಆತನ ಸೂಚನೆಯಂತೆ ಸಾಲ ಪಡೆದು ಹಣವನ್ನು ಸುನಿಲ್‌ ಖಾತೆಗಳಿಗೆ ಜಮೆ ಮಾಡಿರುವುದಾಗಿ ತಿಳಿಸಿದ್ದಾರೆ.

You may also like

Leave a Comment