Home » Udupi: ವಿದೇಶದಲ್ಲಿ ಉದ್ಯೋಗ ಕೊಡಿಸೋದಾಗಿ ಲಕ್ಷಾಂತರ ರೂ. ವಂಚನೆ!

Udupi: ವಿದೇಶದಲ್ಲಿ ಉದ್ಯೋಗ ಕೊಡಿಸೋದಾಗಿ ಲಕ್ಷಾಂತರ ರೂ. ವಂಚನೆ!

by ಕಾವ್ಯ ವಾಣಿ
0 comments

Udupi: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ಉಡುಪಿಯಲ್ಲಿ (Udupi )ನಡೆದಿದೆ.

ಉಮೇಶ್ ಇವರು ಕೆಲಸದ ಬಗ್ಗೆ ತನ್ನ ಗೆಳೆಯನಲ್ಲಿ ವಿಚಾರಿಸಿದ್ದು ಆಗ ಗೆಳೆಯ ಕೆಲಸದ ಪಟ್ಟಿಯನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ವಿದೇಶದಲ್ಲಿ ಒಳ್ಳೆ ಉದ್ಯೋಗ ನೀಡುವುದಾಗಿ ವಂಚಕ ನಂಬಿಸಿದ್ದ.

ಈ ನೆಪದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಹಣವನ್ನು ತೆಗೆದುಕೊಂಡಿದ್ದ. ನಂತರ ಕಾಲ್ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಅವರ ವಂಚನೆ ಬಯಲಿಗೆ ಬಂದಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

You may also like