Home » Mangalore: ಮಂಗಳೂರಿನಲ್ಲಿ ವಂಚಕನೋರ್ವನ ಅರೆಸ್ಟ್‌: ಉದ್ಯಮಿಗಳೇ ಈತನ ಟಾರ್ಗೆಟ್‌

Mangalore: ಮಂಗಳೂರಿನಲ್ಲಿ ವಂಚಕನೋರ್ವನ ಅರೆಸ್ಟ್‌: ಉದ್ಯಮಿಗಳೇ ಈತನ ಟಾರ್ಗೆಟ್‌

by V R
0 comments

Mangalore: ಮಂಗಳೂರಿನಲ್ಲಿ ವಂಚಕನೋರ್ವನ ಅರೆಸ್ಟ್‌ ಆಗಿದ್ದು, ಈತ ಐಷರಾಮಿ ವ್ಯಕ್ತಿಗಳು, ಉದ್ಯಮಿಗಳೇ ಈತನ ಟಾರ್ಗೆಟ್‌ ಆಗಿದ್ದರು, ಕೋಟಿ ಕೋಟಿ ಸಾಲ ಕೊಡುವುದಾಗಿ ಉದ್ಯಮಿಗಳಿಗೆ ನಂಬಿಸಿ, ಇಷ್ಟು ಸಾಲಕ್ಕೆ ಇಷ್ಟು ಹಣ ಎಂದು ಅವರಿಂದ ಹಣ ಪಡೆದು ನಂತರ ಹಣ ಕೊಡದೇ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ರೋಹನ್‌ ಸಲ್ಡನಾ ಬಂಧಿತ ಆರೋಪಿ. ಸಾಲ ಕೊಡಿಸುವ ನಾಟಕ ಮಾಡಿ 200 ಕೋಟಿಗೂ ಅಧಿಕ ವಂಚನೆ ಎಸೆಯಲಾಗಿದೆ. ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಈತ ವಂಚನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಈತ ಕೇವಲ 3 ತಿಂಗಳಿನಲ್ಲಿ 45 ಕೋಟಿಗೂ ಹೆಚ್ಚು ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ.

ವಂಚನೆ ಎಸಗಿದ ಹಣದಿಂದ ಐಷರಾಮಿ ಬಂಗಲೆ ಕಟ್ಟಿ, ಅಲ್ಲಿ ರಹಸ್ಯವಾದ ಅಂಡರ್‌ ಗ್ರೌಂಡ್‌ ಮಾಡಿದ್ದಾನೆ. ಯಾರಾದರೂ ಈತನನ್ನು ಹುಡುಕಿಕೊಂಡು ಬಂದರೆ ಈ ಮೂಲಕ ಆತ ಎಸ್ಕೇಪ್‌ ಆಗುತ್ತಿದ್ದನು. ಇದೀಗ ಪೊಲೀಸರು ಈತನ ಬಂಧನ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.

You may also like