Home » ಉಚಿತ ವಿದ್ಯಾಭ್ಯಾಸಕ್ಕೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ !!

ಉಚಿತ ವಿದ್ಯಾಭ್ಯಾಸಕ್ಕೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ !!

by Praveen Chennavara
0 comments

ಉಚಿತ ವಿದ್ಯಾಭ್ಯಾಸಕ್ಕೆ ಸೇರಬಯಸುವ ಬಡ ಮತ್ತು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶ್ರೀ ಸಿದ್ಧಗಂಗಾ ಮಠದಲ್ಲಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಏ.15ರಿಂದ ಅರ್ಜಿ ವಿತರಿಸಲಾಗುತ್ತಿದ್ದು, ತಮ್ಮ ತಮ್ಮ ಊರುಗಳಿಗೆ ಅಂಚೆ ಮೂಲಕ ಮಠಕ್ಕೆ ಸೇರುವ ಅರ್ಜಿ ಫಾರ್ಮ್ ಮತ್ತು ಅಲ್ಲಿನ ಶಾಲೆಯಿಂದ ವರ್ಗಾವಣೆ ಪತ್ರ ತರಲು ಬೇಕಾದ ಪತ್ರ ತರಿಸಿಕೊಳ್ಳುವ ಸೌಲಭ್ಯವಿದೆ.

ಪ್ರತಿ ಅರ್ಜಿ ಫಾರ್ಮ್‌ಗೆ 20 ರೂ. ಶುಲ್ಕವಿರಲಿದೆ. ಶ್ರೀ ಸಿದ್ದಲಿಂಗೇಶ್ವರ ಅನಾಥಾಲಯ, ಶ್ರೀ ಸಿದ್ಧಗಂಗಾ ಮಠ ತುಮಕೂರು ಜಿಲ್ಲೆ-572104 ವಿಳಾಸಕ್ಕೆ ತಲುಪುವಂತೆ ಎಂಒ ಮಾಡಿ, ವಿದ್ಯಾರ್ಥಿಯ ವಿಳಾಸ ಮತ್ತು ಸೇರಬೇಕಾದ ತರಗತಿ ಮತ್ತು ಮಾಧ್ಯಮ ಬರೆದು ಕಳುಹಿಸಿ. ಅರ್ಜಿ ನಿಮಗೆ ತಲುಪಿದ ನಂತರ ನಿಮ್ಮ ಎಲ್ಲ ದಾಖಲೆಗಳೊಂದಿಗೆ ಶ್ರೀಮಠಕ್ಕೆ ವಿದ್ಯಾರ್ಥಿಯನ್ನು ದಾಖಲಾತಿ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

You may also like

Leave a Comment