

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತ್ತಡ್ಕ ಇದರ ಶತಮಾನೋತ್ಸವದ ಅಂಗವಾಗಿ ಬೆನಕ ಹೆಲ್ತ್ ಸೆಂಟರ್ ಉಜಿರೆ, ಬೆನಕ ಚಾರಿಟೇಬಲ್ ಟ್ರಸ್ಟ್ ಉಜಿರೆ ಮತ್ತು ಎ ಜೆ ರಕ್ತ ಕೇಂದ್ರ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಆದಿತ್ಯ ವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತ್ತಡ್ಕ ಇಲ್ಲಿ ಜರುಗಿತು.

ಶಿಬಿರದ ಉದ್ಘಾಟನೆಯನ್ನು ಅವಿನಾಶ್ ಮಾಲಿಕರು ಅಗ್ರಿಲೀಫ್ ಬರಂಗಾಯ ಇವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ , ಎಂಜಿ ಭಟ್ ವ್ಯವಸ್ಥಾಪಕರು ಬೆನಕ ಆಸ್ಪತ್ರೆ ಉಜಿರೆ, ಗೋಪಾಲಕೃಷ್ಣ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕರು ಎಜೆ ಆಸ್ಪತ್ರೆ ಮಂಗಳೂರು, ಶತಮಾನೋತ್ಸವ ಸಮಿತಿ ಅಧ್ಯಕ್ಷ ಹೆಚ್ ವಿಜಯ್ ಕುಮಾರ್ ಜೈನ್, ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಶ್ವನಾಥ ಹೆಚ್, SDMC ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಹಿರಿಯ ವಿಧ್ಯಾರ್ಥಿ ಮತ್ತು ಪ್ರಗತಿಪರ ಕೃಷಿಕರಾದ ಕೊರಗಪ್ಪ ಮಣ್ಣಗುಂಡಿ ಇವರುಗಳು ಭಾಗವಹಿಸಿದ್ದರು.
65 ಜನ ರಕ್ತದಾನಿಗಳು ಸೇರಿದಂತೆ ಸುಮಾರು 200 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಬೆನಕ ಆಸ್ಪತ್ರೆ ಉಜಿರೆ ಇಲ್ಲಿನ ಡಾ. ಆದಿತ್ಯ ರಾವ್, ಡಾ. ಅಂಕಿತ ಭಟ್, ಡಾ. ರೋಹಿತ್ ಜಿ ಭಟ್, ಡಾ. ಸೂರಜ್ ಶೆಟ್ಟಿ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ತಂಡ ಶಿಬಿರದಲ್ಲಿ ಸಹಕರಿಸಿದರು.

ಶಿಬಿರಕ್ಕೆ ನಿಸರ್ಗ ಯುವಜನೇತರ ಸಂಘ ನಿಡ್ಲೆ, ಶಿವಶಕ್ತಿ ಕಳೆಂಜ, ವನಶ್ರೀ ವಾಟ್ಸಪ್ ಗ್ರೂಪ್ ಮಿಯ್ಯಾರು, ನೇತಾಜಿ ಅಟೋ ಚಾಲಕರ ಸಂಘ ಕಾಯರ್ತ್ತಡ್ಕ, ಉಮಾಮಹೇಶ್ವರ ದೇವಸ್ಥಾನ ಕಾಯರ್ತ್ತಡ್ಕ, ಮಂಜುನಾಥೇಶ್ವರ ಭಜನಾ ಮಂಡಳಿ ಕುದ್ದ ಮೂಡಾರು, ಕುಂಭಶ್ರಿ ಕಾಯರ್ತ್ತಡ್ಕ, ಒಕ್ಕಲಿಗರ ಯುವ ವೇದಿಕೆ ಕಾಯರ್ತ್ತಡ್ಕ, ಕ್ರಿಶ್ಚಿಯನ್ ಬ್ರದರ್ಸ್ ಕಾಯರ್ತ್ತಡ್ಕ ಶತಮಾನೋತ್ಸವ ಸಮಿತಿ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಮತ್ತು ಮಕ್ಕಳು SDMC ಸಮಿತಿ ಚಿಗುರು ಹಿರಿಯ ವಿಧ್ಯಾರ್ಥಿಗಳ ಸಂಘ ಮುಂತಾದ ಸಂಘ ಸಂಸ್ಥೆಗಳ ಸದಸ್ಯರುಗಳು ಸಹಕಾರ ನೀಡಿದರು.














