Home » Karnataka: “ಸರಕಾರಿ ಬಸ್‌ಗಳಲ್ಲಿ ವಿಕಲಚೇತನರಿಗೆ ಉಚಿತ ಪ್ರಯಾಣ: ಸರ್ಕಾರಕ್ಕೆ ಮನವಿ

Karnataka: “ಸರಕಾರಿ ಬಸ್‌ಗಳಲ್ಲಿ ವಿಕಲಚೇತನರಿಗೆ ಉಚಿತ ಪ್ರಯಾಣ: ಸರ್ಕಾರಕ್ಕೆ ಮನವಿ

by ಕಾವ್ಯ ವಾಣಿ
0 comments

Karnataka: ಕರ್ನಾಟಕ (Karnataka) ರಾಜ್ಯದ ವಿಕಲಚೇತನರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಮಾಚ್-2025ರ ಬಜೆಟ್ ನಲ್ಲಿ ಅನೋಮದಿನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ವಿಕಲಚೇತನರಿಗೆ ತಿಂಗಳಿಗೆ ರೂ.5,000/-, ಹಿರಿಯ ನಾಗರೀಕರಿಗೆ ತಿಂಗಳಿಗೆ ರೂ.3,000/- ಮಾಸಾಸನ ನೀಡುವಂತೆ , ವಿಕಲಚೇತನರಿಗೆ ಪ್ರತಿಯೊಂದು ಜಿಲ್ಲೆಯ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ 10 ತ್ರಿಚಕ್ರ ವಾಹನ ಒದಗಿಸಲು, ವಿಕಲಚೇತನರಿಗೆ ಉದ್ಯೋಗದ ಸಲುವಾಗಿ ರೂ.3.00 ಲಕ್ಷದಿಂದ 5.00 ಲಕ್ಷದವರೆಗೂ ಸಬ್ಸಿಡಿ ಮೂಲಕ ಸಾಲ ಒದಗಿಸುವ ಕುರಿತು, ವಿಕಲಚೇತನರಿಗೆ ವಿವಾಹವಾಗಲು ಆಯಾಯ ಜಿಲ್ಲಾಧಿಕಾರಿಗಳ ಮೂಲಕ 2.3.00 ಲಕ್ಷಗಳನ್ನು ವಿವಾಹಕ್ಕೆ ಪ್ರೋತ್ಸಾಹ ನೀಡುವ ಮೂಲಕ ವಿಕಲಚೇತನರಿಗೆ ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಈ ಬಗ್ಗೆ ಸರ್ಕಾರಕ್ಕೆ ಸೂಕ್ತ, ಸಲಹೆ, ಮಾರ್ಗದರ್ಶನ ಮತ್ತು ನಿರ್ದೇಶನ ನೀಡಿ ಕರ್ನಾಟಕ ರಾಜ್ಯದ ವಿಕಲಚೇತನರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಮಾಚ್-2025ರ ಬಜೆಟ್ ನಲ್ಲಿ ಅನೋಮದಿನೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿಸಿ ಕರ್ನಾಟಕ ರಾಜ್ಯದ ಎಲ್ಲಾ ವಿಕಲಚೇತನರಿಗೂ ಅನುಕೂಲ ಮಾಡಿಕೊಡಬೇಕಾಗಿ ಸಮಸ್ ವಿಕಲಚೇತನರ ಪರವಾಗಿ ಬೆಂಗಳೂರು ಉತ್ತರ ಮಾಜಿ ಎಂಪಿ ಅಭ್ಯರ್ಥಿ ಪರಸಪ್ಪ ಗಜ್ಜರಿ ಮನವಿ ಸಲ್ಲಿಸಿದ್ದಾರೆ.

You may also like