Home » 8 Friends Drown: ಸ್ನಾನ ಮಾಡಲೆಂದು ನೀರಿಗಿಳಿದ ಸ್ನೇಹಿತರು: 8 ಜನ ಸಾವು, ಮೂವರ ರಕ್ಷಣೆ

8 Friends Drown: ಸ್ನಾನ ಮಾಡಲೆಂದು ನೀರಿಗಿಳಿದ ಸ್ನೇಹಿತರು: 8 ಜನ ಸಾವು, ಮೂವರ ರಕ್ಷಣೆ

by Mallika
0 comments

8 Friends Drown: ರಾಜಸ್ಥಾನದ ಟೋಂಕ್‌ ಜಿಲ್ಲೆಯ ಬನಾಸ್‌ ನದಿಯಲ್ಲಿ ಮುಳುಗಿ 8 ಯುವಕರು ಸಾವಿಗೀಡಾದ ಘಟನೆ ನಡೆದಿದೆ. ಮೋಜು ಮಾಡಲೆಂದು ನದಿಗೆ ಇಳಿದಿದ್ದ ಯುವಕರ ಪ್ರವಾಸವು ದುರಂತ ಘಟನೆಯಾಗಿ ಮಾರ್ಪಾಡಾಗಿದೆ. ಪಿಕ್ನಿಕ್‌ಗೆಂದು ಬಂದ ಇವರು ನದಿಯಲ್ಲಿ ಇಳಿದು ಸ್ನಾನ ಮಾಡಲು ನಿರ್ಧಾರ ಮಾಡಿದ್ದರು.

ಸಾವಿಗೀಡಾದ ಯುವಕರು 25 ರಿಂದ 30 ವರ್ಷ ವಯಸ್ಸಿನವರು. ಒಟ್ಟು 11 ಮಂದಿ ಸ್ನಾನ ಮಾಡಲು ನದಿಗೆ ಇಳಿದಿದ್ದು, ನೀರಿನ ಆಳ ಹೆಚ್ಚಿತ್ತು. ಇದರಿಂದಾಗಿ ದುರಂತ ನಡೆದಿದೆ. ಇವರನ್ನು ಉಳಿಸುವ ಪ್ರಯತ್ನ ಮಾಡಲಾಯಿತಾದರೂ ಪ್ರಜ್ಞೆ ತಪ್ಪಿದ ಇವರನ್ನು ಜನರು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದರು. ಅಲ್ಲಿ ವೈದ್ಯರು ಬರುವಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇನ್ನುಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.

You may also like