Home » Madhu Bangarappa : ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು-ವಿದ್ಯಾರ್ಥಿಗಳಿಗೆ ‘AI’ ಆಧಾರಿತ ಹಾಜರಾತಿ ಜಾರಿ – ಮಧು ಬಂಗಾರಪ್ಪ ಘೋಷಣೆ !!

Madhu Bangarappa : ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು-ವಿದ್ಯಾರ್ಥಿಗಳಿಗೆ ‘AI’ ಆಧಾರಿತ ಹಾಜರಾತಿ ಜಾರಿ – ಮಧು ಬಂಗಾರಪ್ಪ ಘೋಷಣೆ !!

0 comments

Madhu Bangarappa : ಸರ್ಕಾರಿ ಶಾಲಾ ದಾಖಲಾತಿ ಮತ್ತು ಶಿಕ್ಷಕರ ನೇಮಕ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಗ್​ ಅಪ್ಡೇಟ್​ ನೀಡಿದ್ದು, ಇನ್ಮುಂದೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಎಐ ಆಧಾರಿತ ಹಾಜರಾತಿ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಹೌದು, ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಈ ವರ್ಷವೇ ಕೆಲವು ಬದಲಾವಣೆ ಮಾಡುತ್ತೇವೆ. ಒಂದೂವರೆ ಎರಡು ತಿಂಗಳಲ್ಲಿ ಎಲ್ಲ ಗೊತ್ತಾಗಲಿದೆ. ಸರಕಾರಿ ಶಾಲೆಯಲ್ಲೇ 25 ಸಾವಿರ ಮಕ್ಕಳಿಗೆ ಸಿಇಟಿ ಮತ್ತು ನೀಟ್ ತರಬೇತಿ ಕೊಡುತ್ತಿದ್ದೇವೆ. ಆಸಕ್ತ ಎಲ್ಲ ವಿದ್ಯಾರ್ಥಿಗಳಿಗೂ ಸಿಇಟಿ ಮತ್ತು ನೀಟಿ ತರಬೇತಿ ಕೊಡಿ ಅಂತ ಹೇಳಿದ್ದೇನೆ ಎಂದು ಹೇಳಿದರು.

ಅಲ್ಲದೆ ಬೇರೆ ಬೇರೆ ರಾಜ್ಯದಲ್ಲಿ ಫೇಸಿಯಲ್‌ ಅಟೆಂಡೆನ್ಸ್‌ ಮಾಡುತ್ತಿದ್ದಾರೆ. ಅದೊಂದರಲ್ಲಿ ನಾವು ಹಿಂದಿದ್ದೇವೆ. ಹಿಂದೆ ಇಂತಹ ಪ್ರಯತ್ನ ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ. ಈಗ ಅದೆಲ್ಲವನ್ನು ತಿದ್ದುಪಡಿ ಮಾಡಿ ಒಂದೂವರೆ ತಿಂಗಳಲ್ಲಿ ಇದನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.

You may also like