ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ರಾಜ್ಯ ಸರ್ಕಾರವು ದೊಡ್ಡ ಸಿಹಿಸುದ್ದಿ ನೀಡಿದೆ. ಈವರೆಗೆ ಗ್ರಾಮ ಪಂಚಾಯ್ತಿಯಲ್ಲಿ ದೊರಕುವ ಸೇವೆಗಳಿಗೆ ( Grama Panchayat Service ) ಸಂಬಂಧಿಸಿದಂತೆ ಜನರು ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಸೇವೆಗಳು ಕುಳಿತಲ್ಲೇ ಸಿಗುವಂತೆ ಸರ್ಕಾರ ಯೋಜನೆ ರೂಪಿಸಿದೆ.
ಹೌದು, ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಹವಾಲು ದಾಖಲಿಸುವುದು ಅತಿ ಮುಖ್ಯವಾಗುತ್ತದೆ, ಜನರು ಅಹವಾಲು ಸಲ್ಲಿಸುವುದಕ್ಕಾಗಿ ಸರಳ, ಸುಲಭ ಹಾಗೂ ಸಮರ್ಥ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿದೆ. ಅದೇನೆಂದರೆ ನೀವಿನ್ನು ಯಾವುದಾದರೂ ಸೇವೆಗಳನ್ನು ಪಡೆಯಲು ಗ್ರಾಮ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸಬೇಕೆಂದೇನಿಲ್ಲ. ಬದಲಿಗೆ ನಂಬರಿಗೆ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ ( WhatsApp ) ಮಾಡಿ ಸಾಕು. ಹೀಗೆ ಮಾಡಿದಲ್ಲಿ ನೀವು ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.
ಈ ಪ್ರಕ್ರಿಯೆ ಹೇಗೆ?
* ನಿಮ್ಮ ವಾಟ್ಸಾಪ್ ಮೂಲಕ 82775060000 ಸಂಖ್ಯೆಗೆ Hi ಎಂದು ಕಳುಹಿಸಿ
* ನಿಮ್ಮ ಜಿಲ್ಲೆಯ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ತಾಲೂಕಿನ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಗ್ರಾಮ ಪಂಚಾಯತಿಯ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಗ್ರಾಮದ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಗ್ರಾಮವನ್ನು ಖಚಿತ ಪಡಿಸಲು ಹೌದು ಎಂದು ಸೆಲೆಕ್ಟ್ ಮಾಡಿ
* ಈಗ ನಿಮಗೆ ಬೇಕಿರುವ ಮಾಹಿತಿ/ ಕುಂದುಕೊರತೆ/ ಅಥವಾ ಸೇವೆಗಾಗಿ ಮುಂದುವರೆಸಿ
