Bombay Hogh Court: ಇನ್ನು ಮುಂದೆ ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾದರೂ ಕೂಡ ಫೋಕ್ಸೋ ಕೇಸ್ ರದ್ದು ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮಹಾರಾಷ್ಟ್ರ-ಮುಂಬೈನಲ್ಲಿ 29 ವರ್ಷದ ಯುವಕನೊಬ್ಬ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದು, ಬಳಿಕ ಆರೋಪಿಯು ನಂತರ ಅವಳನ್ನು ಮದುವೆಯಾಗಿದ್ದಾನೆ. ಹೀಗಾಗಿ ಸಂತ್ರಸ್ತೆ ಪ್ರಕರಣವನ್ನು ಹಿಂಪಡೆಯಲು ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯವು ಇದು ಸಾಧ್ಯವಿಲ್ಲವೆಂದು ಹೇಳಿದೆ.
ಇದನ್ನೂ ಓದಿ:Coin: ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ
ಹೌದು, ಈ ವಿಷಯದಲ್ಲಿ ಹೈಕೋರ್ಟ್ ಮೊರೆ ಹೋದಾಗ, ನ್ಯಾಯಾಧೀಶರು, ಅವರು ಮದುವೆಯಾದರೂ ಅವರ ವಿರುದ್ಧದ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಹೇಳುವ ಸಂವೇದನಾಶೀಲ ತೀರ್ಪು ನೀಡಿದರು. ಸಂತ್ರಸ್ತೆ ವಿವಾಹಿತಳಾಗಿದ್ದರೂ ಸಹ ಪೋಕ್ಸೋ ಕಾಯ್ದೆಯು ಅಮಾನ್ಯವಾಗುವುದಿಲ್ಲ ಎಂದು ಹೇಳಿದೆ.
