6
Mysuru: ಆಷಾಢ ಮಾಸದ ಕಾರಣ ಇನ್ನೇನು ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಅದೇ ರೀತಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೂ ಕೂಡ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ಮುಂದೆ ಚಾಮುಂಡಿ ಬೆಟ್ಟದಲ್ಲಿ ಫೋಟೋ ಹಾಗೂ ವಿಡಿಯೋ ಮಾಡುವುದನ್ನು ನಿಷೇಧ ಮಾಡಲಾಗಿದೆ.
ಗರ್ಭಗುಡಿಯ ಬಳಿ ಹಾಗೂ ಪ್ರಾಂಗಣದಲ್ಲಿ ಫೋಟೋ ತೆಗೆಯುವುದು ವಿಡಿಯೋ ಮಾಡುವುದು ಅಥವಾ ರೀಲ್ಸ್ ಮಾಡುವುದನ್ನು ಮಾಡಿದರೆ ಮೊಬೈಲ್ ಹಾಗೂ ಕ್ಯಾಮೆರಾ ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಹಿಂದಿರುಗಿಸಲಾಗುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ;Ranchi: ಮನೆಗೆ ಬಂದು ರೂಮಿನೊಳಗೆ ಸೇರಿಕೊಂಡ ಹುಲಿ!
