Bore Well: ರಾಜ್ಯದಲ್ಲಿ ಅಂತರ್ಜಲ ಮಟ್ಟದ ಕುಸಿತ ಹೆಚ್ಚಾಗುತ್ತಿರುವ ಕಾರಣ ಇನ್ಮುಂದೆ ಬೋರ್ವೆಲ್ ಕೊರೆಸಲು ಅಂತರ್ಜಲ ಪ್ರಾಧಿಕಾರದ ಅನುಮತಿ ಬೇಕೆಂದು ಸರ್ಕಾರ ತಿಳಿಸಿದೆ.
ಈಗಾಗಲೇ ನಾನಾ ಉದ್ದೇಶಗಳಿಗೆ ಕೊಳವೆ ಬಾವಿ ಕೊರೆಸಿ ಬಳಕೆ ಮಾಡುತ್ತಿರುವವರು, ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಂತರ್ಜಲ ನಿರ್ದೇಶನಾಲಯ ತಿಳಿಸಿದೆ.
ಒಂದು ವೇಳೆ ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಯಿಸಿದರೆ ಹಾಗೂ ಕೊಳವೆ ಬಾವಿ ಕೊರೆಸುವಲ್ಲಿ ಇರುವ ನಿಬಂಧನೆಗಳನ್ನು ಉಲ್ಲಂಸಿದಲ್ಲಿ ಕಾರವಾಸ ಶಿಕ್ಷೆ ಹಾಗೂ ದಂಡ(Imprisonment and fine) ಕೂಡ ಬೀಳಲಿದೆ! ಕುಡಿಯುವ ನೀರಿಗೆ ಆದ್ಯತೆ, ನೀರಿನ ಮೂಲ ಸಂರಕ್ಷಣೆ ಉದ್ದೇಶದಿಂದ ರಾಜ್ಯಪಾಲರ ಅಂಕಿತದೊಂದಿಗೆ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಭೂ ಮಾಲೀಕ ಮಾತ್ರವಲ್ಲದೆ, ಅನುಷ್ಠಾನ ಏಜೆನ್ಸಿಗಳೂ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಭೂ ಮಾಲೀಕರು/ ಏಜೆನ್ಸಿಗಳಿಗೆ ಮಾತ್ರವಲ್ಲದೆ, ಕೊಳವೆ ಬಾವಿ ಕೊರೆಸುವಲ್ಲಿ ಮತ್ತು ನಿಷ್ಕ್ರಿಯ ಕೊಳವೆ ಬಾವಿ ನಿರ್ವಹಣೆ ಮಾಡುವ ವಿಚಾರದಲ್ಲಿ ಸ್ಥಳೀಯ ಪ್ರಾಧಿಕಾರಗಳಿಗೂ ಕರ್ತವ್ಯ ನಿಗದಿಪಡಿಸಲಾಗಿದೆ.
