Home » School Time : ಇನ್ಮುಂದೆ ಶಾಲೆಗಳ ತರಗತಿ ಸಮಯ ಅರ್ಧ ಗಂಟೆ ಹೆಚ್ಚು – ರಾಜ್ಯ ಸರ್ಕಾರ ಮಹತ್ವದ ಆದೇಶ

School Time : ಇನ್ಮುಂದೆ ಶಾಲೆಗಳ ತರಗತಿ ಸಮಯ ಅರ್ಧ ಗಂಟೆ ಹೆಚ್ಚು – ರಾಜ್ಯ ಸರ್ಕಾರ ಮಹತ್ವದ ಆದೇಶ

0 comments

School Time: ಸರಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳಲ್ಲಿ ತರಗತಿಗಳ ಸಮಯವನ್ನು ಅರ್ಧ ಗಂಟೆ ಹೆಚ್ಚು, ಅಂದರೆ 30 ನಿಮಿಷಗಳ ಕಾಲ ಹೆಚ್ಚು ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ ಈ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಯಾಗಲಿದೆ. ಅಂದ ಹಾಗೆ ಈ ನಿಯಮ ನಮ್ಮ ಕರ್ನಾಟಕದಲ್ಲಿ ಬಂದಿರುವುದಲ್ಲ ಬದಲಿಗೆ ಕೇರಳ ಸರ್ಕಾರ ಜಾರಿಗೊಳಿಸಿರುವುದು.

ಹೌದು, ಕೇರಳ ಸರ್ಕಾರ ತನ್ನ ರಾಜ್ಯದ ಪ್ರೌಢಶಾಲೆಗಳಿಗೆ ನಿಯಮವನ್ನು ಹೊರಡಿಸಿದೆ. ಅಂತೆಯೇ ಶಾಲಾ ತರಗತಿಗಳು ಬೆಳಿಗ್ಗೆ 15 ನಿಮಿಷಗಳಷ್ಟು ಬೇಗ ಆರಂಭಗೊಂಡು ಸಂಜೆ ಕಾಲು ಗಂಟೆ ತಡವಾಗಿ ತರಗತಿಗಳು ಕೊನೆಯಾಗುತ್ತದೆ. ಅಂದರೆ ಬೆಳಿಗ್ಗೆ 9.45 ಕ್ಕೆ ಶಾಲೆ ಆರಂಭಗೊಂಡು ಸಂಜೆ 4.15 ಕ್ಕೆ ಶಾಲೆ ಬಿಡುತ್ತದೆ. ಈ ವರ್ಷ ಶಾಲಾರಂಭದ ದಿನ ಜೂ.2 ಆಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇರಳ ಶಿಕ್ಷಣ ಸಚಿವ ಶಿವನ್ ಕುಟ್ಟಿ ಹೇಳಿದ್ದಾರೆ.

ಸ್ವರ್ಗದ ಹಾದಿಯಲ್ಲಿ ತೀರಿಕೊಂಡ ಪಾಂಡವರು, ಎಡೆಬಿಡದೆ ಹಿಂಬಾಲಿಸಿದ ಅವರ ನಾಯಿ ಸ್ವರ್ಗ ಸೇರಿತ್ತಾ?

ಇನ್ನು ಕೇವಲ ಹೈಸ್ಕೂಲ್‌ಗಳಿಗೆ ಈ ಸಮಯ ವಿಸ್ತರಣೆ ಮಾಡುವುದರಿಂದ ಹೈಸ್ಕೂಲ್ ಮತ್ತು ಹೆಚ್ಚು ತರಗತಿಗಳನ್ನು ಹೊಂದಿರುವ ಶಾಲೆಗಳಿಗೆ ಸಮಸ್ಯೆಯನ್ನುಂಟು ಮಾಡಲಿದೆ ಎಂದು ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವದ ಮೊದಲ ವೀರ್ಯಾಣು ರೇಸ್‌! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?

 

You may also like