Home » Ambulance: ಇನ್ನು ಮುಂದೆ ಸರ್ಕಾರದಿಂದಲೇ 108 ಆ್ಯಂಬುಲೆನ್ಸ್‌ಗಳ ನಿರ್ವಹಣೆ- ದಿನೇಶ್ ಗುಂಡೂರಾವ್‌

Ambulance: ಇನ್ನು ಮುಂದೆ ಸರ್ಕಾರದಿಂದಲೇ 108 ಆ್ಯಂಬುಲೆನ್ಸ್‌ಗಳ ನಿರ್ವಹಣೆ- ದಿನೇಶ್ ಗುಂಡೂರಾವ್‌

0 comments

 

 

Ambulance: ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ 108 ಆ್ಯಂಬುಲೆನ್ಸ್ (Ambulance) ಅನ್ನು ಇನ್ಮುಂದೆ ಸರ್ಕಾರವೇ ನಿರ್ವಹಣೆ ಮಾಡಲಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಮಾಹಿತಿ ನೀಡಿದ್ದಾರೆ.

 

ಬೆಂಗಳೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಯಾವುದೇ ಏಜೆನ್ಸಿ ಮೂಲಕ 108 ಆ್ಯಂಬುಲೆನ್ಸ್‌ ಕಾರ್ಯ ನಿರ್ವಹಿಸಲ್ಲ, ಸರ್ಕಾರವೇ 108 ಆ್ಯಂಬುಲೆನ್ಸ್‌ ಸರ್ವೀಸ್ ನೀಡುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ. ಏಜೆನ್ಸಿ ಗಳ ನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಇದರ ವಿರುದ್ಧ ಕ್ರಮ ಜರುಗಿಸಿರುವ ಸರ್ಕಾರ ಇನ್ಮುಂದೆ ನಿರ್ವಹಣೆಯನ್ನು ತಾನೇ ಮಾಡಲಿದೆ. ತಕ್ಷಣದಿಂದಲೇ ಅರೋಗ್ಯ ಇಲಾಖೆ ಆದೇಶ ಜಾರಿಗೆ ಬರುತ್ತಿದೆ ಎಂದಿದ್ದಾರೆ.

You may also like