Home » Chikkamaglur : ಇನ್ಮುಂದೆ ಇಷ್ಟ ಬಂದಾಗ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಗೆ ಹೋಗುವಂತಿಲ್ಲ – ಆನ್ಲೈನ್ ಬುಕಿಂಗ್ ಕಡ್ಡಾಯ

Chikkamaglur : ಇನ್ಮುಂದೆ ಇಷ್ಟ ಬಂದಾಗ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಗೆ ಹೋಗುವಂತಿಲ್ಲ – ಆನ್ಲೈನ್ ಬುಕಿಂಗ್ ಕಡ್ಡಾಯ

0 comments

Chikkamaglur : ಚಿಕ್ಕಮಗಳೂರು ಜಿಲ್ಲಾ ಆಡಳಿತವು ಪ್ರವಾಸಿಗರಿಗೆ ದೊಡ್ಡ ಶಾಕ್ ನೀಡಿದೆ. ಇನ್ಮುಂದೆ ಬೇಕೆಂದಾಗ ಎದ್ದುಕೊಂಡು ಸೀದಾ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿಗೆ ಹೋಗಲು ಪ್ರವಾಸ ಸಾಧ್ಯವಿಲ್ಲ. ಯಾಕೆಂದರೆ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರು ಸೆಪ್ಟೆಂಬರ್ 1ರಿಂದ ಆನ್ಲೈನ್ ನಲ್ಲಿ ಮೊದಲೇ ಬುಕಿಂಗ್ ಮಾಡಿಕೊಂಡು ಬರಬೇಕೆಂದು ಜಿಲ್ಲಾಡಳಿತ ಆದೇಶಿಸಿದೆ.

ಹೌದು, ಚಾರಣಕ್ಕೆ ಬರುವ ಪ್ರವಾಸಿಗರ ಹುಚ್ಚಾಟ ಹಾಗೂ ನಿಯಂತ್ರಣಕ್ಕೆ ಸಿಗದಂತೆ ಬರುತ್ತಿದ್ದ ಜನರಿಂದ ಭಾರೀ ಸಮಸ್ಯೆ ಎದುರಾದ ಬಳಿಕ ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರನ್ನು ನಿಯಂತ್ರಿಸಲು ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ. ಸೆಪ್ಟೆಂಬರ್‌ 1 ರಿಂದ ಇದು ಜಾರಿಗೆ ಬರಲಿದ್ದು, ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‌ಗಿರಿ ಚಾರಣಕ್ಕೆ ಹೋಗಬೇಕಿದ್ದಲ್ಲಿ ಮೊದಲು ಆನ್‌ಲೈನ್‌ ಬುಕ್ಕಿಂಗ್‌ ಮಾಡೋದು ಕಡ್ಡಾಯವಾಗಿದೆ.

ಆನ್‌ಲೈನ್ ಬುಕ್ಕಿಂಗ್ ಯಾಕೆ ಕಡ್ಡಾಯ?

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರಾ ಜಲಪಾತಗಳನ್ನು ಒಳಗೊಂಡಿರುವ ಚಂದ್ರದ್ರೋಣ ಗುಡ್ಡಗಾಡು ಪ್ರದೇಶಕ್ಕೆ ವರ್ಷದಿಂದ ವರ್ಷ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಪಾರ ಜನದಟ್ಟಣೆಗೆ ಕಾರಣವಾಗುತ್ತದೆ. ಪ್ರವಾಸಿಗರ ಒಳಹರಿವನ್ನು ನಿಯಂತ್ರಿಸಲು, ಜಿಲ್ಲಾಡಳಿತವು ಬುಕಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ.

ಶುಲ್ಕ ವಿವರ:

ಬೈಕ್‌ಗಳಿಗೆ – ₹50

ಕಾರುಗಳಿಗೆ – ₹100

ತೂಫಾನ್ ವಾಹನಗಳಿಗೆ – ₹150

ಟೆಂಪೊ ಟ್ರಾವೆಲರ್‌ಗಳಿಗೆ – ₹200,ಆನ್‌ಲೈನ್ ಪಾವತಿ ಮಾಡಿದ ನಂತರವೇ ನಿಮ್ಮ ಬುಕಿಂಗ್ ಖಚಿತವಾಗುತ್ತದೆ.

ಪ್ರವಾಸಿಗರಿಗೆ ಎರಡು ಹಂತಗಳಲ್ಲಿ ಅವಕಾಶ ನೀಡಲಾಗುವುದು. ಮೊದಲ ಅವಧಿ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.ಎರಡನೇ ಅವಧಿ ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆಯವರೆಗೆ. ಪ್ರತಿ ಅವಧಿಯಲ್ಲಿ ಕೇವಲ 600 ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ಹೀಗಾಗಿ, ದಿನಕ್ಕೆ ಗರಿಷ್ಠ 1,200 ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ.

ಜಿಲ್ಲಾ ಅಧಿಕೃತ ವೆಬ್‌ಸೈಟ್ https://chikkamagaluru.nic.in/en/tourism ಮೂಲಕ ಬುಕಿಂಗ್ ಮಾಡಬಹುದು

You may also like