Home » Gadag Crime News: ಕುಡಿದು ಟೈಟ್ ಆಗಿ ಹೆಂಡತಿ ಮಡಿಲಲ್ಲಿದ್ದ ಎಳೆಯ ಕಂದಮ್ಮನನ್ನೇ ಹೊತ್ತೊಯ್ದ ತಂದೆ !! ಮುಂದಾಗಿದ್ದೇ ವಿಚಿತ್ರ

Gadag Crime News: ಕುಡಿದು ಟೈಟ್ ಆಗಿ ಹೆಂಡತಿ ಮಡಿಲಲ್ಲಿದ್ದ ಎಳೆಯ ಕಂದಮ್ಮನನ್ನೇ ಹೊತ್ತೊಯ್ದ ತಂದೆ !! ಮುಂದಾಗಿದ್ದೇ ವಿಚಿತ್ರ

1 comment
Gadag Crime News

Gadag Crime News: ಗದಗದ(Gadag)ಲಕ್ಷ್ಮೇಶ್ವರ ಪಟ್ಟಣದಲ್ಲಿ ತಾಯಿ ಮಡಿಲಿನಲ್ಲಿದ್ದ ಆರು ದಿನದ ಗಂಡು ಮಗುವನ್ನು ಕುಡಿದ ಅಮಲಿನಲ್ಲಿ ತಂದೆ ಹೊತ್ತೊಯ್ದ ಘಟನೆ ವರದಿಯಾಗಿದೆ.

ಗದಗದ ಆಸ್ಪತ್ರೆಯಿಂದ ಡಿಸ್ಚಾರ್ಜ‌್ ಆದ ಬಾಣಂತಿ ಮಗುವಿನ ಹಾಗೂ ಪತಿಯೊಂದಿಗೆ ನೆಲೆಸಿದ್ದರು. ಆದರೆ, ತಾಯಿ ಮಡಿಲಲ್ಲಿದ್ದ ಆರು‌ ದಿನದ ಮಗುವನ್ನು ಕುಡಿತದ ಅಮಲಿನಲ್ಲಿದ್ದ ತಂದೆ ಹೊತ್ತೊಯ್ದಿದ್ದು, ತಡರಾತ್ರಿ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಗುವಿನ ಜೊತೆ ಅಡ್ಡಾಡುತ್ತಿದ್ದ.ಮಗುವಿನ ಜೊತೆ ಓಡಾಡುತ್ತಿರುವ ವ್ಯಕ್ತಿಯ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ (CCTV Footage)ಸೆರೆಯಾಗಿದೆ.

ವ್ಯಕ್ತಿ ಹೀಗೆ ತಡರಾತ್ರಿ ಹಸುಗೂಸನ್ನು ಹಿಡಿದು ಓಡಾಟ ನಡೆಸುವುದನ್ನು ಕಂಡ ಸ್ಥಳಿಯರು, ಕೂಡಲೇ ಲಕ್ಷ್ಮೇಶ್ವರ ಠಾಣಾ ಪೊಲೀಸರಿಗೆ‌ ಮಾಹಿತಿ ನೀಡಿದ್ದಾರೆ. ಹೀಗಾಗಿ, ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಣೆ ಮಾಡಿದ್ದಾರೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಗುವನ್ನು ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಇದಾದ ಬಳಿಕ, ಮಗುವಿನ ತಂದೆ ಸ್ಥಳದಿಂದ ಪರಾರಿಯಾಗಿದ್ದು, ಮಗು ಹುಡುಕಿಕೊಂಡು ಮರುದಿನವೇ ಪೋಷಕರು ಆಗಮಿಸಿದ್ದಾರೆ. ಈ ಸಂದರ್ಭ ಮಗು ಹಸ್ತಾಂತರಿಸಲು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಿಂದೇಟು ಹಾಕಿದ್ದು, ಸೂಕ್ತ ತನಿಖೆ ನಡೆದ ನಂತರವೇ ಪೋಷಕರಿಗೆ ಮಗು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

 

ಇದನ್ನು ಓದಿ: Muslim Women: ಮುಸ್ಲಿಂ ಹುಡುಗಿಯರು ಇನ್ಮುಂದೆ ಬ್ಯೂಟಿ ಪಾರ್ಲರ್’ಗೆ ಹೋಗುವಂತಿಲ್ಲ !! ಅರೆ ಏನಿದು ಶಾಕಿಂಗ್ ನ್ಯೂಸ್?

You may also like

Leave a Comment