Home » Gadaga: ನಿಧಿ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ – ಅದು ನಮ್ಮ ಬಂಗಾರ, ವಾಪಸ್​ ನೀಡಿ ಎಂದ ಕುಟುಂಬ

Gadaga: ನಿಧಿ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ – ಅದು ನಮ್ಮ ಬಂಗಾರ, ವಾಪಸ್​ ನೀಡಿ ಎಂದ ಕುಟುಂಬ

0 comments

 

Gadaga: ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಆದರೆ ಇದೀಗ ಅದು ನಮ್ಮದೇ ಬಂಗಾರ, ನಮಗೆ ವಾಪಸ್ ಕೊಟ್ಟುಬಿಡಿ ಎಂದು ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಹೌದು,  ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿತ್ತು. ಗಂಗವ್ವ ರಿತ್ತಿ ಕುಟುಂಬ ತಮ್ಮ ಸ್ವ – ಇ ಚ್ಛೆ ಯಿಂದ ಸರ್ಕಾರಕ್ಕೆ ನಿಧಿಯನ್ನ ನೀಡಲು ನಿರ್ಧರಿಸಿದ್ದರು. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದರು. ಆದರೆ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಇದು ನಿಧಿ ಅಲ್ಲ, ಬದಲಿಗೆ ಕುಟುಂಬದ ಹಿರಿಯರು ತಮ್ಮ ಮನೆಯಲ್ಲೇ ಇಟ್ಟಿದ್ದ ಬಂಗಾರ ಎಂದು ಸ್ಪಷ್ಟಪಡಿಸಿದ್ದಾರೆ. 

 

ಪುರಾತತ್ವ ಇಲಾಖೆಯಈ ಹೇಳಿಕೆಯು ಇಡೀ ಗ್ರಾಮಸ್ಥರು ಮತ್ತು ಚಿನ್ನ ಸಿಕ್ಕ ಕುಟುಂಬದ ಮನಸ್ಥಿತಿಯನ್ನು ಬದಲಾಯಿಸಿದೆ. ಅಧಿಕಾರಿಗಳ ಸ್ಪಷ್ಟನೆ ಬೆನ್ನಲ್ಲೇ, ಇದು ನಿಧಿ ಅಲ್ಲದಿದ್ದರೆ, ನಮ್ಮದೇ ಆದ ಚಿನ್ನವನ್ನು ನಮಗೆ ವಾಪಸ್ ಕೊಡಿ ಎಂದು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಈಗ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ಮೊದಲಿಗೆ ಸರ್ಕಾರಕ್ಕೆ ಒಪ್ಪಿಸಲು ಸಮ್ಮತಿಸಿದ್ದ ಕುಟುಂಬ, ಈಗ ಚಿನ್ನದ ಮರುಪಡೆಯುವಿಕೆಗೆ ಪಟ್ಟು ಹಿಡಿದಿದೆ.

You may also like