Home » Gandhiji: ಮೊದಲ ಸ್ವಾತಂತ್ರ್ಯೋತ್ಸವಕ್ಕೆ ನೆಹರು ಕರೆದರೂ ಬರೆದ ಗಾಂಧೀಜಿ – ಹಾಗಿದ್ರೆ 1947ರ ಆಗಸ್ಟ್ 15ರಂದು “ಗಾಂಧೀಜಿ” ಎಲ್ಲಿದ್ದರು ಗೊತ್ತಾ..?

Gandhiji: ಮೊದಲ ಸ್ವಾತಂತ್ರ್ಯೋತ್ಸವಕ್ಕೆ ನೆಹರು ಕರೆದರೂ ಬರೆದ ಗಾಂಧೀಜಿ – ಹಾಗಿದ್ರೆ 1947ರ ಆಗಸ್ಟ್ 15ರಂದು “ಗಾಂಧೀಜಿ” ಎಲ್ಲಿದ್ದರು ಗೊತ್ತಾ..?

0 comments

Gandhiji: ನಮ್ಮ ಭಾರತ ದೇಶಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರದ. ಅನೇಕ ಮಹನೀಯರ ಹೋರಾಟದ ಫಲದಿಂದ ಭಾರತ ಸ್ವತಂತ್ರವಾಯಿತು. ಸ್ವತಂತ್ರ ದಕ್ಕಿದ ಕೂಡಲೇ ಜವಾಹರ್ಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಿಯಾಗಿ ಆಯ್ಕೆಯಾದರು. ಈ ವೇಳೆ ಧ್ವಜಾರೋಹಣಕ್ಕೆ ಸ್ವತಃ ನೆಹರು ಅವರೇ ಗಾಂಧೀಜಿಯವರನ್ನು ಖುದ್ದಾಗಿ ಕರೆದರೂ ಕೂಡ ಗಾಂಧೀಜಿ ಮಾತ್ರ ಅಲ್ಲಿಗೆ ಬರಲಿಲ್ಲ. ಹಾಗಿದ್ದರೆ ಅಂದು ಗಾಂಧಿ ಎಲ್ಲಿದ್ದರೂ ಗೊತ್ತೇ?

ಹೌದು, 1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಂಡು ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದಾಗ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದೆಹಲಿಯ ಕೆಂಪುಕೋಟೆ ಸಮಾರಂಭದಲ್ಲಿ ಕಾಣಿಸಲಿಲ್ಲ. ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಗಾಂಧೀಜಿಯನ್ನು ಸ್ವಾತಂತ್ರ್ಯ ದಿನದ ಆಚರಣೆಗೆ ಆಹ್ವಾನಿಸಿದರೂ, ಅವರು ಬರಲಿಲ್ಲ.

ಕಾರಣ ದೇಶಾದ್ಯಂತ ಸಂಭ್ರಮವಿದ್ದ ಆ ದಿನ, ಗಾಂಧೀಜಿ ಬಂಗಾಳದ ನೊಖಾಲಿ ಪ್ರದೇಶದಲ್ಲಿ ಶಾಂತಿ ಮಿಷನ್‌ನಲ್ಲಿ ತೊಡಗಿಕೊಂಡಿದ್ದರು. ಸ್ವಾತಂತ್ರ್ಯದ ಜೊತೆ ದೇಶ ವಿಭಜನೆಯಾಗಿದ್ದು, ಪಂಜಾಬ್ ಮತ್ತು ಬಂಗಾಳದಲ್ಲಿ ಭೀಕರ ಕೋಮು ಗಲಭೆಗಳು ನಡೆದಿದ್ದವು. ಲಕ್ಷಾಂತರ ಜನರು ಮನೆಬಿಟ್ಟು ತೆರಳಬೇಕಾದ ಪರಿಸ್ಥಿತಿ ಎದುರಿಸಿದ್ದರು, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ, ಗಾಂಧೀಜಿ ಹಿಂದೂ-ಮುಸ್ಲಿಂ ಐಕ್ಯತೆಗೆ ಪ್ರಾಮುಖ್ಯತೆ ನೀಡುತ್ತಾ, ಹಿಂಸಾಚಾರ ಶಮನಗೊಳಿಸಲು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಹೀಗಾಗಿ ಯಾರೂ ಕರೆದರೂ ‘ನಾನು ಸಂತೋಷವಾಗಿರಲು ಸಾಧ್ಯವಿಲ್ಲ. ನಮ್ಮ ಸ್ವಾತಂತ್ರ್ಯವು ಭಾರತ-ಪಾಕಿಸ್ತಾನದ ಭವಿಷ್ಯ ಸಂಘರ್ಷದ ಬೀಜ ಬಿತ್ತಿದೆ ಎಂದು ಪ್ರತಿಕ್ರಿಯಿಸಿದ್ದರು.

Adhar Card: ಮದುವೆಯ ಬಳಿಕ ಆಧಾರ್ ಕಾರ್ಡ್ ನಲ್ಲಿ ಗಂಡನ ಹೆಸರು ಸೇರಿಸಬೇಕೆ? ಜಸ್ಟ್ ಈ ರೀತಿ ಮಾಡಿ

You may also like