ಗೀಸರ್ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಗ್ಯಾಸ್ ಗೀಸರ್ನಿಂದ ಹೊರಬರುವ ಅನಿಲವು ವ್ಯಕ್ತಿಯನ್ನು ಪ್ರಜ್ಞಾಹೀನರನ್ನಾಗಿ ಮಾಡುತ್ತದೆ ಮತ್ತು ಕೋಮಾದಂತಹ ಸ್ಥಿತಿಗೆ ತಳ್ಳುತ್ತದೆ ಇದು ನಮಗೆ ಗೊತ್ತಿರುವ ವಿಚಾರ ಆಗಿದ್ದರೂ ಸಹ ಕೆಲವೊಮ್ಮೆ ನಮ್ಮ ಕೈ ಮೀರಿ ಎಷ್ಟೋ ಅಪಾಯಗಳು ಆಗಿರುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ.ಹಾಗೆಯೇ ಸ್ನಾನಕ್ಕೆಂದು ಹೋಗಿದ್ದ ನವವಧು ಗೀಸರ್ ಸೋರಿಕೆಯಿಂದ ಮರಣ ಹೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಉತ್ತರಪ್ರದೇಶದ ಮೀರತ್ ನಗರದಲ್ಲಿ ನವವಧುವೊಬ್ಬರು ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಸಾಕಷ್ಟು ಸಮಯವಾದರೂ ಹೊರ ಬಾರದಿರುವ ಕಾರಣ ಅನುಮಾನಗೊಂಡು ಮನೆಯವರು ಬಾಗಿಲು ತಟ್ಟಿದ್ದಾರೆ. ಸ್ನಾನದ ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವ ಕಾರಣ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಆಕೆ ಪಜ್ಞೆ ತಪ್ಪಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮೇಲಿನ ಘಟನೆ ನಂತರವಾದರೂ ನೀವು ಎಚ್ಚರಾವಹಿಸಬೇಕಾಗಿದೆ. ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಗ್ಯಾಸ್ ಗೀಸರ್ ಅಳವಡಿಸಿದ್ದರೆ ಗೀಸರ್ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಸ್ನಾನದ ಮನೆಯ ಹೊರಗೆ ಇರಿಸಿ. ಸ್ನಾನದ ಮನೆಯ ಬಾಗಿಲು ಹಾಕುವ ಮುನ್ನ ಬಕೆಟ್ ಅನ್ನು ಬಿಸಿ ನೀರಿನಿಂದ ತುಂಬಿಕೊಳ್ಳಿ. ಸ್ಮಾನಗೃಹದಲ್ಲಿ ಗಾಳಿ ಚೆನ್ನಾಗಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಸ್ನಾನ ಮಾಡಿದ ನಂತರ ಸ್ವಲ್ಪ ಸಮಯದವರೆಗೆ ಸ್ನಾನಗೃಹದ ಬಾಗಿಲನ್ನು ತೆರೆದಿಡುವುದನ್ನ ರೂಢಿಸಿಕೊಳ್ಳಿ.
ಸದ್ಯ ಈ ಗೀಸರ್ ಬಳಕೆ ನಮಗೆ ಬಿಸಿ ನೀರಿಗೆ ಸುಲಭ ಕ್ರಮ ಆಗಿರಬಹುದು ಆದರೂ ಬಹಳ ಜಾಗರೂಕತೆಯಿಂದ ಬಳಸುವುದು ಸೂಕ್ತ ಇಲ್ಲವಾದರೆ ಸುಖಾ ಸುಮ್ಮನೆ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದುಬಿಡಬಹುದು.
