Home » Viral Video : ದೈತ್ಯ ಹೆಬ್ಬಾವು ವ್ಯಕ್ತಿಯೋರ್ವನನ್ನು ಜೀವಂತ ನುಂಗಿದ ವೀಡಿಯೋ ವೈರಲ್‌ | ಭಯಾನಕವಾಗಿದೆ ಈ ವೀಡಿಯೋ

Viral Video : ದೈತ್ಯ ಹೆಬ್ಬಾವು ವ್ಯಕ್ತಿಯೋರ್ವನನ್ನು ಜೀವಂತ ನುಂಗಿದ ವೀಡಿಯೋ ವೈರಲ್‌ | ಭಯಾನಕವಾಗಿದೆ ಈ ವೀಡಿಯೋ

0 comments

ದೈತ್ಯ ಹೆಬ್ಬಾವು ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಯಾಕೆಂದರೆ ದೈತ್ಯ ಪ್ರಾಣಿಗಳನ್ನು ನುಂಗಿ ತೇಗುವ ಸಾಮರ್ಥ್ಯ ಹೆಬ್ಬಾವಿಗೆ ಇದೆ. ಹಾಗಿರುವಾಗ ಮನುಷ್ಯ ಹೆಬ್ಬಾವಿಗೆ ಭಯ ಪಡದೇ ಇರಲು ಸಾಧ್ಯವಿಲ್ಲ. ಸದ್ಯ ಇಲ್ಲೊಂದು ಹೆಬ್ಬಾವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

ಈ ವಿಡಿಯೋದಲ್ಲಿ ಕಾಡಿನಲ್ಲಿ ಕಾರೊಂದು ನಿಂತಿದ್ದು ದೈತ್ಯ ಹೆಬ್ಬಾವು ಅದಕ್ಕೆ ಸುತ್ತಿಕೊಂಡಿರುವುದನ್ನು ಕಾಣಬಹುದು ಅದೇ ಸಂದರ್ಭದಲ್ಲಿ ದೈತ್ಯ ಹೆಬ್ಬಾವು ಅಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ನಿಧಾನವಾಗಿ ನುಂಗಲು ಪ್ರಯತ್ನಿಸುತ್ತದೆ. ಮತ್ತೊಂದೆಡೆ, ಅವನನ್ನು ಉಳಿಸಲು ಇಬ್ಬರು ಹೋರಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.

https://www.instagram.com/reel/Cn_BFuTKnjk/?utm_source=ig_web_button_share_sheet

ಹೌದು Instagram ಖಾತೆ earth.brains ನಲ್ಲಿ ಈ ವಿಡಿಯೋ ದೃಶ್ಯ ನೋಡಿ ವೀಕ್ಷಕರು ಆಶ್ಚರ್ಯಗೊಂಡಿದ್ದು ಅಲ್ಲದೆ ಹಲವಾರು ಟೀಕೆಗಳನ್ನು ಮಾಡಿದ್ದಾರೆ. ಇನ್ನು ಕೆಲವರಿಗೆ ಇದರ ಅಸಲಿಯತ್ತು ಏನಿರಬಹುದು ಎಂಬ ಗೊಂದಲ ಉಂಟಾಗಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇಂತಹ ಹಲವಾರು ವಿಡಿಯೋ ನಾವು ನೋಡಿರಬಹುದು ಅಥವಾ ಕೇಳಿರಬಹುದು. ಏನೇ ಇರಲಿ ಕೆಲವೊಂದು ಘಟನೆಗಳನ್ನು ನಾವೇ ಒಪ್ಪಿಕೊಳ್ಳಲೇ ಬೇಕು.

You may also like

Leave a Comment