Home » Bigg Boss-12 : ಬಿಗ್ ಬಾಸ್ ಮನೆಯಲ್ಲಿ ‘ಡೆವಿಲ್’ ಸಿನಿಮಾ ಬಗ್ಗೆ ಗಿಲ್ಲಿ ಮಾತು – ಅಚ್ಚರಿ ಸತ್ಯ ಬಾಯ್ಬಿಟ್ಟ ಸ್ಪಂದನ!!

Bigg Boss-12 : ಬಿಗ್ ಬಾಸ್ ಮನೆಯಲ್ಲಿ ‘ಡೆವಿಲ್’ ಸಿನಿಮಾ ಬಗ್ಗೆ ಗಿಲ್ಲಿ ಮಾತು – ಅಚ್ಚರಿ ಸತ್ಯ ಬಾಯ್ಬಿಟ್ಟ ಸ್ಪಂದನ!!

0 comments

Bigg Boss-12 : ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಕೊನೆಯ ಹಂತದಲ್ಲಿ ಸ್ಪಂದನ ಸೋಮಣ್ಣ ಅವರು ಎಲಿಮಿನೇಟ್ ಆಗಿದ್ದಾರೆ. ಇದೀಗ ಅವರನ್ನು ಅನೇಕ ಮಾಧ್ಯಮಗಳು ಮಾತನಾಡಿಸಿವೆ. ಈ ವೇಳೆ ಅವರು ಹಲವು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅಂತೆಯೇ ಗಿಲ್ಲಿ ನಟ ಅವರ ಬಿಗ್ ಬಾಸ್ ಮನೆಯೊಳಗಡೆ ಡೆವಿಲ್ ಸಿನಿಮಾ ಬಗ್ಗೆ ಮಾತನಾಡಿದ್ದರು ಎಂಬುದನ್ನು ಕೂಡ ಅವರು ರಿವಿಲ್ ಮಾಡಿದ್ದಾರೆ.

ದರ್ಶನ್ ಅಭಿನಯದ ಸಿನಿಮಾದಲ್ಲಿ ತಾವು ಕೂಡ ನಟಿಸಬೇಕು ಎಂಬುದು ಬಹುತೇಕ ಎಲ್ಲ ಕಲಾವಿದರ ಆಸೆ ಆಗಿರುತ್ತದೆ. ಗಿಲ್ಲಿ ನಟ ಅವರು ‘ದಿ ಡೆವಿಲ್’ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಿದ್ದಾರೆ. ಡಿಸೆಂಬರ್ 11ರಂದು ಆ ಸಿನಿಮಾ ಬಿಡುಗಡೆ ಆಯಿತು. ಆದರೆ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ ಎಂಬುದು ಬಿಗ್ ಬಾಸ್ ಮನೆಯ ಒಳಗೆ ಇರುವ ಗಿಲ್ಲಿಗೆ ತಿಳಿಯಲಿಲ್ಲ. ಪ್ರತಿ ಸೀಜನ್ ಅಲ್ಲಿ ಯಾರಾದರೂ ಸಿನಿಮಾ ಮಾಡಿದ್ದರೆ ಅದರ ಪ್ರೋಮೋವನ್ನು ಬಿಗ್ ಬಾಸ್ ಮನೆಯಲ್ಲಿ ಹಾಕುತ್ತಾರೆ. ಆದರೆ ಈ ಸಲ ಗಿಲ್ಲಿ ನಟ ಅವರಿಗೆ ಡೆವಿಲ್ ಸಿನಿಮಾ ರಿಲೀಸ್ ಬಗ್ಗೆ ಆಗಲಿ ಅದರ ಪ್ರೋಮೋ ಆಗಲಿ ತೋರಿಸಲಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಗಿಲ್ಲಿ ಅವರಿಗೆ ಏನು ಗೊತ್ತಿಲ್ಲ ಎಂದುಕೊಂಡಿದ್ದರು. ಆದರೆ ಇದೀಗ ಸ್ಪಂದನ ಅವರು ಗಿಲ್ಲಿ ಡೆವಿಲ್ ಸಿನಿಮಾ ಕುರಿತು ಮಾತನಾಡಿದ್ದ ಎಂಬುದನ್ನು ತಿಳಿಸಿದ್ದಾರೆ.

‘ಡೆವಿಲ್ ಸಿನಿಮಾ ಬಗ್ಗೆ ಗಿಲ್ಲಿ ಮಾತನಾಡುತ್ತಿದ್ದ. ಈ ವಾರ ರಿಲೀಸ್ ಆಗಿರಬಹುದು ಎನ್ನುತ್ತಿದ್ದ. ದೊಡ್ಡ ಪಾತ್ರ ಅಲ್ಲ, ಆದರೆ ಇಂಟರ್​ವಲ್​ನಲ್ಲಿ ತಾನೇ ಬರುವುದು ಎಂಬ ವಿಷಯವನ್ನು ಹೇಳಿಕೊಂಡಿದ್ದ. ಅದರ ಬಗ್ಗೆ ಅವನು ಬಹಳ ಖುಷಿಯಾಗಿದ್ದ. ಗೆಸ್ಟ್ ಯಾರೋ ಬಂದಾಗ ಕೂಡ ಡೆವಿಲ್ ಬಗ್ಗೆ ಹೇಳಿದಾದ ಗಿಲ್ಲಿ ತುಂಬಾ ಹೆಮ್ಮೆಪಟ್ಟಿದ್ದ’ ಎಂದು ಸ್ಪಂದನಾ ಸೋಮಣ್ಣ ಅವರು ಹೇಳಿದ್ದಾರೆ.

You may also like