ಸಾಮಾಜಿಕ ಹೋರಾಟಗಾರ ಮತ್ತು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್ ಮಂಗಳೂರಿನಲ್ಲಿ ನಾಳೆ ಧಿಡೀರ್ ಪತ್ರಿಕಾಗೋಷ್ಠಿ ಕರೆದಿದ್ದಾರೆ. SDM ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ಶೋಷಣೆ ಮತ್ತು ಈ ಕುರಿತು ನಡೆಯುತ್ತಿರುವ ಹಲವು ವಿದ್ಯಮಾನಗಳ ಬಗ್ಗೆ ಗಿರೀಶ್ ಮಟ್ಟೆನ್ನನವರ್ ಪತ್ರಿಕಾಗೋಷ್ಠಿ ಕರೆದಿದ್ದು ಅಲ್ಲಿ ಇಡೀ ಪ್ರಕರಣದ ಬಗ್ಗೆ ಮಹತ್ವದ ಸತ್ಯ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಆದುದರಿಂದ ಗಿರೀಶ್ ಮಟ್ಟಣ್ಣನವರ್ ಕರೆದ ಪತ್ರಿಕಾಗೋಷ್ಠಿ ತೀವ್ರ ಕುತೂಹಲ ಮೂಡಿಸಿದೆ.
ಏನಂದ್ರು ಮಟ್ಟೆಣ್ಣನವರ್ ?
“ಮಂಗಳೂರಿನ ಎಲ್ಲ ಮಾಧ್ಯಮ ಮಿತ್ರರಿಗೆ ನಮಸ್ಕಾರ. ನಾಳೆ ಗುರುವಾರ ದಿನಾಂಕ 16-11-23 ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ SDM ವಿದ್ಯಾರ್ಥಿನಿಯ ಮೇಲಾದ ಲೈಂಗಿಕ ಶೋಷಣೆ ಕುರಿತಾದ ಪ್ರಕರಣವನ್ನು ತಿರುಚುತ್ತಿರುವ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ.
ಯಾವುದೇ ಭಯ ಅಥವಾ ಒತ್ತಡ ಇಲ್ಲದೆ, ವಾಸ್ತವ ತಿಳಿಯುವ ಹಂಬಲ ಇರುವ, ಮಾಧ್ಯಮ ವಲಯದಲ್ಲಿ ಕಾರ್ಯಪ್ರವೃತ್ತರಾದ ಪತ್ರಿಕಾ ವರದಿಗಾರರು,Tv ಮಾಧ್ಯಮ, U tube ಮಾಧ್ಯಮದ ಎಲ್ಲ ಮಿತ್ರರಿಗೆ ಈ ಮೂಲಕ ಆಹ್ವಾನಿಸುತ್ತಿದ್ದೇನೆ.” ಎಂದು ಮಾಜಿ ಪೊಲೀಸ ಅಧಿಕಾರಿ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ ಗಿರೀಶ್ ಮಟ್ಟಣ್ಣನವರ್ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.
ಸ್ಥಳ : ಮಂಗಳೂರು ಜಿಲ್ಲಾ ಪತ್ರಿಕಾ ಭವನ.
ಸಮಯ : ಬೆಳಿಗ್ಗೆ 11:15.
ದಿನಾಂಕ : 16-11-2023, ಗುರುವಾರ.
ಎಲ್ಲಾ ಸಾಮಾಜಿಕ ಕಳಕಳಿ ಇರುವ ಮಾಧ್ಯಮ ಮಿತ್ರರನ್ನು ಗಿರೀಶ್ ಮಟ್ಟಣ್ಣನವರ್ ವಿಶೇಷವಾಗಿ ಆಹ್ವಾನಿಸಿದ್ದಾರೆ.
