Home » Rabies: ರೇಬಿಸ್‌ ಲಸಿಕೆ ಪಡೆದ ಬಾಲಕಿ ಸಾವು!

Rabies: ರೇಬಿಸ್‌ ಲಸಿಕೆ ಪಡೆದ ಬಾಲಕಿ ಸಾವು!

0 comments

Rabies: ರೇಬಿಸ್‌ ಲಸಿಕೆ ಪಡೆದಿದ್ದ ಏಳು ವರ್ಷದ ಬಾಲಕಿ, ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೊಲ್ಲಂನ ಕುನ್ನಿಕೋಡ್‌ನ ನಿಯಾ ಫೈಸಲ್‌ ಮೃತ ಬಾಲಕಿ.

ಬಾಲಕಿಯಲ್ಲಿ ರೇಬಿಸ್‌ ಪತ್ತೆಯಾದ ಕಾರಣ ಆಕೆಯನ್ನು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಾಲಕಿಯನ್ನು ವಿಲಕ್ಕುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ರೇಬಿಸಿ ಲಸಿಕೆಯ ಮೊದಲ ಡೋಸ್‌ ನೀಡಲಾಗಿತ್ತು. ಅನಂತರ ಎ.11 ಮತ್ತು 15 ರಂದು ಎರಡನೇ ಮತ್ತು ಮೂರನೇ ಡೋಸ್‌ ನೀಡಲಾಗಿದೆ. ಅಂತಿಮ ಡೋಸ್‌ ಮೇ.6 ರಂದು ನೀಡಲು ದಿನಾಂಕ ನಿಗದಿಯಾಗಿತ್ತು. ಆದರೆ ಎರಡನೇ ಡೋಸ್‌ ಪಡೆದ ಕೆಲ ದಿನಗಳಲ್ಲಿ ಆಕೆಗೆ ಜ್ವರ ಬಂದಿದೆ.

ನಾಯಿ ಕಚ್ಚಿದ ಮೊಣಕೈಯಲ್ಲಿ ನೋವು ಪ್ರಾರಂಬವಾಗಿದೆ. ಆಕೆಯನ್ನು ಪುನಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಎಸ್‌ಎಟಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಬಾಲಕಿಗೆ ಕಚ್ಚಿದ್ದ ನಾಯಿಯನ್ನು ಸ್ಥಳೀಯರು ಓಡಿಸಿದ್ದರೂ, ಹತ್ತಿರದ ಹೊಲದಲ್ಲಿ ಶವವಾಗಿ ಪತ್ತೆಯಾಗಿತ್ತು.

You may also like