Home » Social Media: ರೀಲ್ಸ್’ಗಾಗಿ ನಡುರಸ್ತೆಯಲ್ಲೇ ಕಾಲಗಲಿಸಿ ಕುಳಿತ ಮಹಿಳೆ !! ಫೇಮಸ್ ಆಗಲು ಈಕೆ ಮಾಡಿದ್ದೇನೆಂದು ಗೊತ್ತಾದ್ರೆ ನೀವೂ ಹೌಹಾರುತ್ತೀರಾ !!

Social Media: ರೀಲ್ಸ್’ಗಾಗಿ ನಡುರಸ್ತೆಯಲ್ಲೇ ಕಾಲಗಲಿಸಿ ಕುಳಿತ ಮಹಿಳೆ !! ಫೇಮಸ್ ಆಗಲು ಈಕೆ ಮಾಡಿದ್ದೇನೆಂದು ಗೊತ್ತಾದ್ರೆ ನೀವೂ ಹೌಹಾರುತ್ತೀರಾ !!

1 comment
Social Media

Social media: ಮೊಬೈಲ್(Mobile)ಎಂಬ ಮಾಯಾವಿ ಇಂದು ಎಲ್ಲರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ(Social Media)ಫೋಟೋ ವಿಡಿಯೋ ಹಾಕುತ್ತಾ ಅದೆಷ್ಟೋ ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ವಿಶೇಷವಾಗಿ ರೀಲ್ಸ್ ಪ್ರಿಯರ ಕಥೆ ಹೇಳೋದೇ ಬೇಡ!! ಸಿಕ್ಕಸಿಕ್ಕಲ್ಲಿ ರೀಲ್ಸ್ ಮಾಡುವ ಭರದಲ್ಲಿ ಅಪಾಯಕ್ಕೆ ಎಡೆ ಮಾಡಿಕೊಡುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ಇದೇ ರೀತಿಯ ಘಟನೆಯೊಂದು ಗುಜರಾತ್‌ನಲ್ಲಿ ವರದಿಯಾಗಿದೆ.

ಗುಜರಾತ್‌ನ ದಿನಾ ಪರ್ಮರ್ ಎಂಬ ಮಹಿಳೆ ದಟ್ಟ ಸಂಚಾರ ಇರುವ ರಸ್ತೆ ಮೇಲೆ ಯೋಗಾಸನದ ಶಾರ್ಟ್ ವಿಡಿಯೋ ಮಾಡಲು ಹೋಗಿ ಪೇಚಿಗೆ ಸಿಲುಕಿದ ಘಟನೆ ವರದಿಯಾಗಿದೆ.ಜಿಟಿ ಜಿಟಿ ಮಳೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ಜಿನುಗುತ್ತಿದ್ದ ಮಳೆಯ ನಡುವೆ ರಸ್ತೆ ಮಧ್ಯೆ ಯೋಗಾಸನ ಮಾಡಿದರೆ ಹೇಗಿರಬಹುದು !! ಅದರಲ್ಲಿಯೂ ದಟ್ಟ ಸಂಚಾರವಿರುವ ರಸ್ತೆಯಾಗಿದ್ದರೆ, ಸಾರ್ವಜನಿಕರಿಂದ ಮಂಗಳಾರತಿ ಆಗೋದು ಗ್ಯಾರಂಟಿ!! ರೀಲ್ ಮಾಡಿ ಮಾಡಿ ಲಕ್ಷ ಲಕ್ಷ ಲೈಕ್ಸ್ ಗಳಿಸಿ, ಜನಪ್ರಿಯತೆ ಗಳಿಸಬೇಕು ಎನ್ನುವ ಹುಚ್ಚಲ್ಲಿ ಪೊಲೀಸರ ಅತಿಥಿಯಾಗಿದ್ದಾಳೆ!! ಇಲ್ಲೊಬ್ಬಳು ಮಹಿಳೆ!
ಕೆಂಪು ಬಣ್ಣದ ಡ್ರೆಸ್‌ನೊಂದಿಗೆ ಬಂದ ಯುವತಿ ಏಕಾಏಕಿ ಯೋಗಾಸನ ಮಾಡಲು ಶುರು ಮಾಡಿದ್ದು, ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದ ಪರಿಣಾಮ ಇವಳ ರೀಲ್ಸ್ ಹುಚ್ಚಿನಿಂದ ಉಳಿದವರು ಸಂಚಾರ ಮಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ವಿಚಾರ ಗುಜರಾತ್‌ನ ಪೊಲೀಸರ ಗಮನಕ್ಕೆ ಬಂದು ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ತಪೊಪ್ಪಿಗೆ ಬರೆಸಿಕೊಂಡು, ಇದರ ಜೊತೆಗೆ ದಂಡವನ್ನೂ ಕಟ್ಟಿಸಿಕೊಂಡಿರುವ ಪೊಲೀಸರು, ಟ್ರಾಫಿಕ್ ರೂಲ್ ಫಾಲೋ ಮಾಡುವಂತೆ ಆಕೆಗೆ ತಿಳಿ ಹೇಳಿ ವಿಡಿಯೋ ಮಾಡಿಸಿದ್ದಾರೆ. ಅದನ್ನು ಗುಜರಾತ್ ಪೊಲೀಸರು ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದು, ಗುಜರಾತ್ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ: ಉಡುಪಿ: ಹಿಂದೂ ಸಮಾಜೋತ್ಸವ ಹಿನ್ನೆಲೆ!ಜಿಲ್ಲೆಗೆ ಪ್ರವೇಶಿಸದಂತೆ ಪೊಲೀಸರಿಂದ ಶರಣ್ ಪಂಪ್ ವೆಲ್ ಗೆ ಹೆಜಮಾಡಿಯಲ್ಲೇ ತಡೆ

You may also like

Leave a Comment