Suicide: ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ.
ಜೂನ್ 28ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ , ಬಾಲಕಿ ಹಾಗೂ ಆಕೆಯ ಮೂರು ವರ್ಷದ ತಮ್ಮ ಇದ್ದಾಗ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿಪಿನ್ ಆಕೆಯ ಮನೆ ಮುಂದೆ ಬೈಕ್ ನಿಲ್ಲಿಸಿದ್ದ. ಆತ ವಿಶಾಲ್ ಹಾಗೂ ಹೇಮಂತ್ ಜತೆ ಅಲ್ಲಿಗೆ ಬಂದಿದ್ದ. ಬಾಲಕಿಯ ತಮ್ಮನ ಬಳಿ ಬೈಕ್ನಲ್ಲಿ ಒಂದು ರೈಡ್ ಹೋಗಿ ಬರೋಣ ಅಕ್ಕನನ್ನು ಕರೆದುಕೊಂಡು ಬಾ ಎಂದು ಹೇಳಿ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ನೇಹಾ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಎರಡು ದಿನಗಳ ಕಾಲ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಬಳಿಕ ಮನೆಯವರು ತುಂಬಾ ವಿಚಾರಿಸಿದಾಗ ಆಕೆ ತನಗಾದ ನೋವಿನ ಕುರಿತು ಹೇಳಿಕೊಂಡಿದ್ದಾಳೆ. ಬಳಿಕ ಆಕೆಯ ಮನೆಗೆ ಕರೆದುಕೊಂಡು ಬಂದು ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಾಯಿತು. ಪ್ರಕರಣದಲ್ಲಿ ಮೂವರು ಹುಡುಗರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಆದರೆ ಬಾಲಕಿ ಈ ನೋವನ್ನು ಮರೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: India: ರಷ್ಯಾ ಮಹಿಳೆ, ಮಕ್ಕಳನ್ನು ನೋಡಲು ಭಾರತಕ್ಕೆ ಬಂದ ಇಸ್ರೇಲ್ ಪ್ರಿಯಕರನಿಗೆ ನಿರಾಶೆ!
