Home » Pinarayi Vijayan: ಕೋಮುವಾದ ಹರಡಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್

Pinarayi Vijayan: ಕೋಮುವಾದ ಹರಡಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್

0 comments

Pinarayi Vijayan: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಲ್ಲಿ, ಇಡೀ ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿದ್ದ ʻದಿ ಕೇರಳ ಸ್ಟೋರಿʼ (The Kerala Story) ಸಿನಿಮಾದ ಸುದಿತ್ತೋ ಸೇನ್ ಅವರಿಗೆ ʻಅತ್ಯುತ್ತಮ ನಿರ್ದೇಶಕ ಪ್ರಶಸ್ತಿʼ ಹಾಗೂ ʻBest Cinematographyʼ ಪ್ರಶಸ್ತಿ ನೀಡಿರುವುದಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ಈ ಕುರಿತು ಮಾತನಾಡಿರುವ ವಿಜಯನ್‌ (Pinarayi Vijayan), ಕೋಮುವಾದ ಪ್ರಚೋದಿಸಲು ಹಾಗೂ ಕೇರಳಕ್ಕೆ ಅವಹೇಳನ ಮಾಡಲು ಯತ್ನಿಸಿದ್ದ ಸಿನಿಮಾವನ್ನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಸಿನಿಮಾ ರಂಗವನ್ನ ತೀರ್ಪುಗಾರರು ಅವಮಾನಿಸಿದ್ದಾರೆ ಎಂದಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾ 2023ರಲ್ಲಿ ತೆರೆಕಂಡಿತ್ತು. ರಾಜ್ಯದ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ, ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂದು ಚಿತ್ರದ ಟೀಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಚಿತ್ರದ ಬೆನ್ನಲ್ಲೇ ಕೇರಳದಲ್ಲಿ ಭಾರೀ ಪ್ರತಿಭಟನೆ ಕೂಡ ನಡೆದಿತ್ತು.

ಇದನ್ನೂ ಓದಿ: Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ಹಾಸ್ಯನಟ ಹೋಟೆಲ್ ಕೋಣೆಯಲ್ಲಿ ನಿಗೂಢವಾಗಿ ಸಾವು

You may also like