Home » ಗೋಪ್ರೇಮಿ,ಸ್ನೇಹ ಜೀವಿ ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನ

ಗೋಪ್ರೇಮಿ,ಸ್ನೇಹ ಜೀವಿ ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್ ಹೃದಯಾಘಾತದಿಂದ ನಿಧನ

by Praveen Chennavara
0 comments

ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದ ಗೋಪ್ರೇಮಿ,ಸ್ನೇಹ ಜೀವಿ ಇನ್ಸ್‌ಪೆಕ್ಟರ್‌ ಮಹಮ್ಮದ್ ರಫೀಕ್ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಬೆಂಗಳೂರಿನ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಫೀಕ್ ಅವರು ಬೆಳಗ್ಗೆ ಎದ್ದು ಸ್ಥಾನಕ್ಕೆ ತೆರಳಿದಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ವೈದ್ಯರನ್ನು ಮನೆಗೆ ಕರೆಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ರಫೀಕ್ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ.

ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್ ರಫೀಕ್ ಸ್ನೇಹ ಜೀವಿಯಾಗಿದ್ದರು. ರಫೀಕ್ ಇತ್ತೀಚೆಗೆ ಖಾಸಗಿ ಚಾನಲ್ ಒಂದರಲ್ಲಿ ಹಾಡುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಸುಬ್ರಹ್ಮಣಿ ಜೊತೆ ಶೋ ಒಂದರಲ್ಲಿ ಭಾಗವಹಿಸಿದ್ದರು.

ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಅವುಗಳಿಗೆ ಆಹಾರ ನೀಡಿ ಆರೈಕೆ ಮಾಡುತ್ತಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕರುವೊಂದನ್ನು ಸಾಕುತ್ತಿದ್ದರು. ಆ ಬಳಿಕ ವರ್ಗಾವಣೆಗೊಂಡಾಗ ಆ ಕರುವನ್ನು ಜೊತೆಯಲ್ಲೇ ಕರೆದೊಯ್ದು ಪ್ರಾಣಿ ಪ್ರೀತಿ ತೋರಿಸಿದ್ದರು.

You may also like

Leave a Comment