Home » Deepawali: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ನಾಳೆ ‘ಗೋಪೂಜೆ’ ಕಡ್ಡಾಯ: ರಾಮಲಿಂಗಾ ರೆಡ್ಡಿ

Deepawali: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ನಾಳೆ ‘ಗೋಪೂಜೆ’ ಕಡ್ಡಾಯ: ರಾಮಲಿಂಗಾ ರೆಡ್ಡಿ

0 comments

 

Deepawali: ರಾಜ್ಯದ ಎಲ್ಲಾ ಮುಜರಾಯಿ ವ್ಯಾಪ್ತಿಯ ದೇವಾಲಯದಲ್ಲಿ ನಾಳೆ ಗೋಪೂಜೆ ಕಡ್ಡಾಯಗೊಳಿಸಿ ಎಂದು ಈ ಬಗ್ಗೆ ಸಾರಿಗೆ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಮೌಖಿಕ ಆದೇಶ ಹೊರಡಿಸಿದ್ದಾರೆ.

ದೀಪಾವಳಿ(Deepawali) ಬಲಿಪಾಡ್ಯಮಿ ದಿನದಂದು ಅಂದರೆ ನಾಳೆ ಮುಜರಾಯಿ ವ್ಯಾಪ್ತಿಗೊಳಪಡುವ ಎಲ್ಲಾ ದೇವಾಲಯಗಳಲ್ಲಿ ಗೋಪೂಜೆ ಮಾಡಲು ಸೂಚನೆ ನೀಡಿದ್ದಾರೆ.

ಬಲಿಪಾಡ್ಯಮಿಯಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸುವ ಸಲುವಾಗಿ ಆ ದಿನ ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತರಬೇಕು. ನಂತರ ಗೋವುಗಳನ್ನು ಅರಿಶಿಣ, ಕುಂಕುಮ ಹಚ್ಚಿ ಹೂವುಗಳಿಂದ ಅಲಂಕರಿಸಬೇಕು. ಅಕ್ಕಿ, ಬೆಲ್ಲ, ಬಾಳೆಹಣ್ಣು(banana), ಸಿಹಿ (sweet ) ತಿನಿಸು ಮುಂತಾದ ಗೋ ಪ್ರಿಯ ಭಕ್ಷ ಅವುಗಳಿಗೆ ನೀಡಬೇಕು ಎಂದು ತಿಳಿಸಿದ್ದಾರೆ.

You may also like