ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ಜನರನ್ನು ನಗೆಗೆಡಲಲ್ಲಿ ತೇಲಾಡಿಸುವ ವಿಡಿಯೋ ತುಣುಕುಗಳು ಹರಿದಾಡುತ್ತಿರುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿರುವ ವಿಡಿಯೋವೊಂದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಹಜವಾಗಿಯೆ ಜನರಲ್ಲಿ ಮಂದಹಾಸ ಮೂಡಿಸುತ್ತದೆ .
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಬದುಕಿಗೆ ಸಂಬಂಧಿಸಿದ ಅನೇಕ ವಿಚಾರದ ವೀಡಿಯೋ ತುಣುಕುಗಳು ಹರಿದಾಡಿ ತಮಾಷೆಯ ದೃಶ್ಯಗಳು ಕಾಣಸಿಗುವುದು ಸಾಮಾನ್ಯ ಆದರೆ, ಎಷ್ಟೋ ಬಾರಿ ಕೆಲ ವಿಚಾರಗಳು ನಮ್ಮಲ್ಲಿ ನಗು ತರಿಸುವ ನಡುವೆಯೇ ಹೀಗೂ ಉಂಟೇ?? ಎಂಬ ಪ್ರಶ್ನೆಯನ್ನು ಮೂಡಿಸಿ ಅಚ್ಚರಿಗೆ ಎಡೆ ಮಾಡಿಕೊಡುತ್ತದೆ.
ಮೇಕೆಗಳು ಇರುವ ದೃಶ್ಯವನ್ನು ಹೊಂದಿರುವ ವೀಡಿಯೊದಲ್ಲಿ ಮೇಕೆಗಳು ರಸ್ತೆಯಲ್ಲಿ ಸಾಗುವಾಗ , ಅಲ್ಲಿಗೆ ಪಾರ್ಸೆಲ್ ಸರ್ವೀಸ್‌ನ ಟ್ರಕ್ ಬರುವುದನ್ನು ಗಮನಿಸಿ ಟ್ರಕ್ ಕಂಡ ಕೂಡಲೇ ಮೇಕೆಗಳು ಕೆಳಗೆ ಬೀಳುತ್ತವೆ. ಅಂದರೆ ಮೇಕೆಗಳಿಗೇನು ಆಗಿಲ್ಲ ಬದಲಿಗೆ, ನಾಲ್ಕು ಮೇಕೆಗಳು ಮೂರ್ಛೆ ಹೋದಂತೆ ನಟಿಸುವ ದೃಶ್ಯವನ್ನು ಇಲ್ಲಿ ನೋಡಬಹುದಾಗಿದೆ.
ಈ ದೃಶ್ಯ ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. `ಯುಪಿಎಸ್ ಟ್ರಕ್ ಕಂಡಾಗ ಮೂರ್ಛೆ ಬೀಳುವ ಮೇಕೆಗಳು’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಬಲು ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಈ ದೃಶ್ಯ ಕಂಡು ಬೆರಗಾಗಿದ್ದಾರೆ.
ಸಾಮಾನ್ಯವಾಗಿ ಮನುಷ್ಯರು ನಟನೆ ಮಾಡಿ ಮೋಡಿ ಮಾಡುವುದು ವಾಡಿಕೆ. ಆದರೆ ಪ್ರಾಣಿಗಳು ಕೂಡ ನಟಿಸುತ್ತವೆ ಎಂದರೆ ಆಶ್ಚರ್ಯವಾಗುತ್ತದೆ.
ಕೆಲವೊಮ್ಮೆ ತಮ್ಮ ಜೀವ ರಕ್ಷಣೆಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಕೂಡ ನಟನೆ ಮಾಡುವುದು ಸಹಜ. ಏಕೆಂದರೆ ದೊರೆತಿರುವ ಅಮೂಲ್ಯವಾದ ವರದಾನವಾಗಿರುವ ಜೀವವನ್ನು ಕಾಪಾಡಲು ಪ್ರತಿಯೊಬ್ಬರೂ ಸೆಣಸಾಡುವುದು ಸಹಜ.
ಇದಕ್ಕೆ ಪ್ರಾಣಿಗಳು ಕೂಡ ಹೊರತಾಗಿಲ್ಲ ಎಂಬುದಕ್ಕೆ ಈ ವೀಡಿಯೋವೆ ನಿದರ್ಶನ ಎನ್ನಬಹುದು. ವೈರಲ್ ಆಗುತ್ತಿರುವ ವೀಡಿಯೋ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲರೂ ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ.
ಕೆಲವರಿಗೆ ಈ ದೃಶ್ಯ ಎಡಿಟೆಡ್ ಆಗಿರಬಹುದು ಎನ್ನಲಾಗುತ್ತಿದೆ. ಅನುಮಾನ, ಕುತೂಹಲಗಳೇನೇ ಇದ್ದರೂ ಸಾಕಷ್ಟು ಮಂದಿ ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದ್ದು, ಎಲ್ಲರ ಮುಖದಲ್ಲೂ ನಗು ತರಿಸಿರುವುದಂತು ಸ್ಪಷ್ಟ.
