Home » Maharastra : 40 ಸಾವಿರ ರೂ. ಮೌಲ್ಯದ ಚಿನ್ನದ ಓಲೆ ನುಂಗಿದ ಮೇಕೆಗಳು!! ಆದ್ರೂ ಪ್ಲಾನ್ ಮಾಡಿ ಹೊರತೆಗೆದ ಮಾಲೀಕ- ಕೊಲ್ಲಲಿಲ್ಲ, ಹೊಡೆಯಲಿಲ್ಲ, ಹಾಗಿದ್ರೆ ಮಾಡಿದ್ದೇನು?

Maharastra : 40 ಸಾವಿರ ರೂ. ಮೌಲ್ಯದ ಚಿನ್ನದ ಓಲೆ ನುಂಗಿದ ಮೇಕೆಗಳು!! ಆದ್ರೂ ಪ್ಲಾನ್ ಮಾಡಿ ಹೊರತೆಗೆದ ಮಾಲೀಕ- ಕೊಲ್ಲಲಿಲ್ಲ, ಹೊಡೆಯಲಿಲ್ಲ, ಹಾಗಿದ್ರೆ ಮಾಡಿದ್ದೇನು?

0 comments

Maharastra : ಎರಡು ಮೇಕೆಗಳು ಸೇರಿಕೊಂಡು ಸುಮಾರು 40 ಸಾವಿರ ಮೌಲ್ಯದ ಚಿನ್ನದ ಓಲೆಗಳನ್ನು ನುಂಗಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಬಳಿಕ ಆಭರಣಗಳನ್ನು ಪಡೆಯಲು ಕುರಿಗಳ ಮಾಲೀಕ ಮಾಡಿದ್ದೇನು ಎಂದು ತಿಳಿದರೆ ನೀವು ಕೂಡ ಅಚ್ಚರಿಗೊಳ್ಳುತ್ತೀರಿ.

ಹೌದು, ಮಿರಾಜ್ ತಾಲ್ಲೂಕಿನ ಸೋನಿಯಲ್ಲಿ ಪ್ರಕಾಶ್ ಗಧಾವೆ ಎಂಬ ರೈತನ ಮಗಳು ತನ್ನ ಕಿವಿಯಿಂದ ಎರಡು ಚಿನ್ನದ ಕಿವಿಯೋಲೆಗಳನ್ನು ತೆಗೆದು ನೀರಿನ ಪಾತ್ರೆಯಲ್ಲಿ ಇಟ್ಟಿದ್ದಳು. ಈ ಓಲೆಗಳ ಬೆಲೆ ಸುಮಾರು 40,000. ಪ್ರಕಾಶ್ ಗಧಾವೆ ಅವರ ಮನೆಯಲ್ಲಿ ಎರಡು ಮೇಕೆಗಳು ಪಾತ್ರೆಯಿಂದ ನೀರು ಕುಡಿಯುವಾಗ ಚಿನ್ನದ ಆಭರಣವನ್ನು ನುಂಗಿದ್ದಾವೆ. ಗೊಂದಲಕ್ಕೊಳಗಾದ ಮಾಲೀಕರಿಗೆ ಆಗ ಏನು ಮಾಡಬೇಕೆಂದು ತೋಚದೆ, ಆ ಮೇಕೆಗಳನ್ನು ಸೀದಾ ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ. ಅಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಆ ಚಿನ್ನದ ಆಭರಣಗಳನ್ನು ಹೊರೆತೊಗಿದ್ದಾನೆ

ಯಸ್, ಮೀರಜ್‌ನಲ್ಲಿರುವ ಪಶು ವೈದ್ಯರನ್ನು ಸಂಪರ್ಕಿಸಿದ ಮಾಲೀಕ ಆಪರೇಷನ್ ಮಾಡಿ ಚಿನ್ನವನ್ನು ಹೊರತೆಗೆಯಲು ಕೇಳಿಕೊಂಡಿದ್ದಾನೆ. ಅಂತೆಯೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮೇಕೆಯ ಹೊಟ್ಟೆಯಿಂದ ಎರಡು ಗ್ರಾಂ ಚಿನ್ನದ ಕಿವಿಯೋಲೆಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈಗ ಎರಡೂ ಮೇಕೆಗಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

You may also like