Home » Gold Jewelley Rule: ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಹೊಸ ನಿಯಮ ಹೇರಿದ ಗ್ರಾಮ

Gold Jewelley Rule: ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಹೊಸ ನಿಯಮ ಹೇರಿದ ಗ್ರಾಮ

0 comments
Marriage

Limit on Jewellery: ಆಭರಣ ಪ್ರಿಯ ಸ್ತೀಯರು ಶುಭ ಸಮಾರಂಭಗಳಲ್ಲಿ ಧರಿಸುವ ಚಿನ್ನಕ್ಕೆ ಮಿತಿಯನ್ನು ಹೇರಲಾಗಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ನಡೆದಿದೆ. ಆಭರಣ ಖರೀದಿಗೆಂದು ಅಧಿಕ ವೆಚ್ಚ ಮಾಡಿ ಜನ ಸಾಲಗಾರರಾಗುವುದನ್ನು ತಪ್ಪಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರಲು ಈ ಹೊಸ ನಿಯಮವನ್ನು ರೂಪಿಸಲಾಗಿದೆ. ಇದನ್ನು ಉಲ್ಲಂಘನೆ ಮಾಡಿದರೆ ಭಾರೀ ಮೊತ್ತದ ದಂಡವನ್ನು ನಿಗದಿಪಡಿಸಲಾಗಿದೆ.

ಈ ಹೊಸ ನಿಯಮ ಉತ್ತರಾಖಂಡದ ಕಂಧಾರ್‌ ಗ್ರಾಮದಲ್ಲಿ ಜಾರಿಗೆ ಬಂದಿದೆ. ಬಡ ಪರಿವಾರಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ, ಸಭೆಯಲ್ಲಿ ಸರ್ವಾನುಮತದಿಂದ ಈ ನಿಯಮವನ್ನು ಅಂಗೀಕರಿಸಲಾಗಿದೆ. ಮದುವೆ ಹಾಗೂ ಇತರೆ ಶುಭಕಾರ್ಯಗಳಿಗೆ ಹಾಜರಾಗುವ ವಿವಾಹಿತ ಹೆಂಗಳೆಯರು ಕೇವಲ 3 ಬಗೆಯ ಆಭರಣ ತೊಡಬಹುದಾಗಿದೆ. ಮೂಗುತಿ, ಕಿವಿಯೋಲೆ, ಮಾಂಗಲ್ಯ ಸರ. ಉಳಿದ ಎಲ್ಲಾ ಆಡಂಬರದ ಆಭರಣವನ್ನು ನಿರ್ಬಂಧ ಮಾಡಲಾಗಿದೆ. ಒಂದೊಮ್ಮೆ ಇದನ್ನು ಉಲ್ಲಂಘನೆ ಮಾಡಿದರೆ ರೂ.50000 ದಂಡ ವಿಧಿಸಲಾಗುವುದು.

ಇಂತಹ ನಿಯಮವನ್ನು ಜಾರಿಗೆ ತರುವ ಮೂಲಕ ಕಂಧಾರ್‌ ಗ್ರಾಮಸ್ಥರು ಹೊಸ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎನ್ನಬಹುದು.

You may also like