Home » Gold Smuggling Case: ರನ್ಯಾ ವಿರುದ್ಧ ಅಶ್ಲೀಲ ಪದ ಬಳಕೆ; ಯತ್ನಾಳ್‌ ವಿರುದ್ಧ FIR

Gold Smuggling Case: ರನ್ಯಾ ವಿರುದ್ಧ ಅಶ್ಲೀಲ ಪದ ಬಳಕೆ; ಯತ್ನಾಳ್‌ ವಿರುದ್ಧ FIR

0 comments
Basavanagouda Yatnal

Yatnal: ಚಿನ್ನ ಅಕ್ರಮ ಸಾಗಾಣಿಕೆ ಕೇಸಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ ಕುರಿತು ಅಸಭ್ಯ ಪದ ಬಳಸಿದ ಆರೋಪ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗಪ್ಪ ರೆಡ್ಡಿ ಲೇಔಟ್‌ ನಿವಾಸಿ ವೈದ್ಯೆ ಅಕುಲಾ ಅನುರಾಧ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ರನ್ಯಾ ಯಾರ ಜೊತೆ ಸಂಬಂಧ ಹೊಂದಿದ್ದಾರೆ. ಎಲ್ಲಿಂದ ಚಿನ್ನ ತಂದರು ಎನ್ನುವ ಮಾಹಿತಿ ನನಗಿದೆ. ಅಲ್ಲದೇ ಆಕೆ ಎಲ್ಲೆಲ್ಲಿ ಚಿನ್ನ ಇಟ್ಟುಕೊಂಡು ಬಂದಿದ್ದಾಲೆ ಎನ್ನುವ ಕುರಿತು ಅಶ್ಲೀಲ ಪದ ಬಳಕೆ ಮಾಡಿರುವ ಕುರಿತು ಮಾ.17 ರಂದು ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯತ್ನಾಳ್‌ ಅವರು ಹೇಳಿದ್ದಾರೆ.

ರನ್ಯಾ ಗೌರವಕ್ಕೆ ಧಕ್ಕೆ ತಂದಿದ್ದಾರೆ, ನಟಿಯ ಸಿನಿಮಾದಲ್ಲಿ ನಟನೆ ಮಾಡಿದ್ದು, ಆಕೆಯ ಗೌರವ, ಚಾರಿತ್ರ್ಯಕ್ಕೆ ಧಕ್ಕೆ ಬರುವ ರೀತಿ ಹೇಳಿಕೆ ನೀಡಿರುವ ಯತ್ನಾಳ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕುಲಾ ಅವರು ದೂರಿನಲ್ಲಿ ವಿವರಿಸಿದ್ದಾರೆ.

You may also like