Home » Gold Smuggling: ಚಿನ್ನ ಕಳ್ಳಸಾಗಾಣೆ ಪ್ರಕರಣ; ರನ್ಯಾ ರಾವ್‌ ಪತಿ ಬಂಧನದಿಂದ ಬಚಾವ್‌!

Gold Smuggling: ಚಿನ್ನ ಕಳ್ಳಸಾಗಾಣೆ ಪ್ರಕರಣ; ರನ್ಯಾ ರಾವ್‌ ಪತಿ ಬಂಧನದಿಂದ ಬಚಾವ್‌!

by ಹೊಸಕನ್ನಡ
0 comments

Gold Smuggling: ಚಿನ್ನ ಕಳ್ಳಸಾಗಾಣೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಅವರ ಬಂಧನವಾಗಿದ್ದು, ರನ್ಯಾ ರಾವ್‌ ಪತಿ ಜತಿನ್‌ ಹುಕ್ಕೇರಿಗೆ ತಾತ್ಕಾಲಿಕವಾಗಿ ಬಂಧನದಿಂದ ಸದ್ಯಕ್ಕೆ ಪಾರಾಗಿದ್ದಾರೆ. ರನ್ಯಾ ಪತಿ ಜತಿನ್‌ ಹುಕ್ಕೇರಿ ಅವರು ಬಂಧನ ಭೀತಿಯಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್‌, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಇಂದು (ಮಂಗಳವಾರ ಮಾ.11) ಆದೇಶ ನೀಡಿದೆ.

ಪತ್ನಿಯ ಮೇಲಿನ ಆರೋಪಕ್ಕೂ ಜತಿನ್‌ಗೂ ಸಂಬಂಧವಿಲ್ಲ. ಡಿಆರ್‌ಐ ಅಧಿಕಾರಿಗಳು ಸಮನ್ಸ್‌ ನೀಡಿದಾಗ ತನಿಖೆಗೆ ಸಹಕಾರ ನೀಡಿದ್ದಾರೆ. ಸುಪ್ರೀಂಕೋರ್ಟ್‌ನ ನಿರ್ದೇಶನ ಪಾಲಿಸದೇ ಬಂಧನ ಮಾಡುವ ಸಾಧ್ಯತೆ ಇದೆ ಎಂದು ವಕೀಲರು ವಾದ ಮಂಡಿಸಿದರು. ಇದನ್ನು ಆಲಿಸಿದ ಹೈಕೋರ್ಟ್‌, ಕಾನೂನು ಪ್ರಕ್ರಿಯೆ ಪಾಲಿಸದೇ ಜತಿನ್‌ ಅವರನ್ನು ಬಂಧನ ಮಾಡದಂತೆ ಆದೇಶ ನೀಡಿದೆ.

You may also like