Gold smuggling: ಮಾಡಬಾರದ ಕೆಲಸ ಮಾಡಿದರೆ ಹೀಗೆ ಆಗೋದು. ಕೆಲವು ಕೆಲಸಗಳನ್ನು ಮಾಡಬಾರದು ಅಂತ ಗೊತ್ತಿದ್ದರು ಜನ ಅದನ್ನೇ ಮಾಡ್ತಾರೆ. ಮತ್ತೆ ಅನ್ಯಾಯವಾಗಿ ಪೊಲೀಸರ ಅತಿಥಿಯಾಗ್ತಾರೆ. ಇಲ್ಲೊಬ್ಬ ಪ್ರಯಾಣಿಕ ತನ್ನ ಒಳ ಉಡುಪಿನೊಳಗೆ ಚಿನ್ನ ಇಟ್ಟುಕೊಂಡು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರೊಫೈಲಿಂಗ್ ಆಧಾರದ ಮೇಲೆ ಸಂಶಯಾಸ್ಪದ ವ್ಯಕ್ತಿಗಳನ್ನು ತಪಾಸಣೆ ನಡೆಸುವಾಗ ಈ ಕಳ್ಳ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವನ ಒಳ ಉಡುಪಿನಲ್ಲಿಟ್ಟುಕೊಂಡಿದ್ದ ಒಂದೂವರೆ ಕೆಜಿ ಗೋಲ್ಡ್ ನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಒಳ ಉಡುಪಿನಲ್ಲಿ ಅಡಗಿಸಿಕೊಂಡು ಅಕ್ರಮವಾಗಿ ಚಿನ್ನ ಸಾಗಿಸಲು ಈ ಪ್ರಯಾಣಿಕ ಯತ್ನಿಸಿದ್ದಾನೆ. ಕೌಲಾಲಂಪುರದಿಂದ ಬಂದಿದ್ದ ಈ ಆರೋಪಿಯಿಂದ 1.06 ಕೋಟಿ ಮೌಲ್ಯದ 1.49 ಕೆ.ಜಿ ತೂಕದ ಗೋಲ್ಡ್ ಬಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಈ ಆರೋಪಿಯನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ವಿಚಾರಣೆಯನ್ನು ಕೈಗೊಳ್ಳುತ್ತಿದ್ದಾರೆ.
