NEET- UG : 2025ರ ಸಾಲಿನ ನೀಟ್-ಯುಜಿ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದ್ದುಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಆಗಿರುವುದು ಬೆಳಕಿಗೆ ಬಂದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹೌದು, ಪಿಯು ಪರೀಕ್ಷೆಯಲ್ಲಿ ಗಣಿತ, ಬಯೋಲಾಜಿ ಫೀಜಿಕ್ಸ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿರುವ ಪ್ರಿಯಾ, ವೈದ್ಯಕೀಯ ಶಿಕ್ಷಣ ಪಡೆಯುವ ಉದ್ದೇಶದಿಂದ ನೀಟ್ ಪರೀಕ್ಷೆ ಬರೆದಿದ್ದಳು. ಆದ್ರೆ ಮೊನ್ನೆ ನೀಟ್ ಫಲಿತಾಂಶ ಬಂದ ಮೇಲೆ ವಿದ್ಯಾರ್ಥಿನಿಗೆ ಶಾಕ್ ಆಗಿದೆ. ಬಳಿಕ ಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂದಹಾಗೆ ನೀಟ್ ನಲ್ಲಿ ನನಗೆ 633 ಅಂಕ ಬರಬೇಕಿತ್ತು. ಅದರೆ ನನಗೆ ಬಂದಿರೋದು ಕೇವಲ 469 ಅಂಕಗಳು ಬೇರೆಯವರ ಫಲಿತಾಂಶ ನನಗೆ ನೀಡಿದ್ದಾರೆಂದು ವಿದ್ಯಾರ್ಥಿನಿ ಪ್ರಿಯಾ ಗಂಭೀರ ಆರೋಪ ಮಾಡಿದ್ದಾರೆ. ಉತ್ತರ ಪತ್ರಿಕೆಯ OMR ಸೀಟ್ ಬದಲಾಗಿದೆ. ನೋಂದಣಿ ಸಂಖ್ಯೆಯನ್ನ ತಿದ್ದಿ ಬರೆಯಲಾಗಿದೆ. ಸಹಿ ಕೂಡಾ ನನ್ನದಲ್ಲ. ಬೇರೆ ಯಾರದ್ದೋ ಫಲಿತಾಂಶವನ್ನ ತಮಗೆ ನೀಡಿರುವುದಾಗಿ ವಿದ್ಯಾರ್ಥಿನಿ ಪ್ರಿಯಾ ಆರೋಪಿಸಿದ್ದಾಳೆ.
ಈ ಸಂಬಂಧ ರಾಜ್ಯದ ಎಂಪಿ ಹಾಗೂ ಸಚಿವರ ಗಮನಕ್ಕೆ ತಂದ್ರು ಯಾರು ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಪ್ರಿಯಾ ಅಳಲು ತೋಡಿಕೊಂಡಿದ್ದಾಳೆ. ಇನ್ನು NTA ವಿರುದ್ಧ ಪೋಷಕರ ಕಿಡಿಕಾಡಿದ್ದು, ಅನ್ಯಾಯದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
