Home » Bank Account: ಈ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಸಿಹಿ ಸುದ್ದಿ- ” ‘ಬ್ಯಾಲೆನ್ಸ್ ‘ ಕುರಿತು ಭರ್ಜರಿ ಘೋಷಣೆ ಹೊರಡಿಸಿದ ಬ್ಯಾಂಕ್

Bank Account: ಈ ಬ್ಯಾಂಕಲ್ಲಿ ಖಾತೆ ಹೊಂದಿರೋರಿಗೆ ಸಿಹಿ ಸುದ್ದಿ- ” ‘ಬ್ಯಾಲೆನ್ಸ್ ‘ ಕುರಿತು ಭರ್ಜರಿ ಘೋಷಣೆ ಹೊರಡಿಸಿದ ಬ್ಯಾಂಕ್

1 comment
Bank Account

Bank Of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ (BOB) ಉಳಿತಾಯ ಅಥವಾ ಚಾಲ್ತಿ ಖಾತೆಯನ್ನು ಹೊಂದಿದ್ದರೆ, ಈ ವಿಚಾರ ಮೊದಲು ತಿಳಿದುಕೊಳ್ಳಿ. ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ(Bank Of Baroda)ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಬ್ಯಾಂಕ್‌ ನಲ್ಲಿ ಖಾತೆ ತೆರೆದ ಸಂದರ್ಭ ಖಾತೆಯಲ್ಲಿ ಬ್ಯಾಲೆನ್ಸ್‌(Bank Balance)ಹೊಂದಿರಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈಗ ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್ ಗ್ರಾಹಕರಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬ್ಯಾಂಕಿನಲ್ಲಿ ಶೂನ್ಯ ಬ್ಯಾಲೆನ್ಸ್‌ನೊಂದಿಗೆ(Zero Balance)ಖಾತೆ ತೆರೆಯಬಹುದಾಗಿದ್ದು, ಇದಲ್ಲದೆ ಈ ಖಾತೆಯ ಅಡಿಯಲ್ಲಿ ಗ್ರಾಹಕರು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಪಡೆಯಲು ಅನುವು ಮಾಡಿಕೊಡಲಾಗಿದೆ.

ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ, ಬ್ಯಾಂಕ್‌ ಅನೇಕ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್‌ ಐಟಂ, ದಿನಸಿ, ಜೀವನಶೈಲಿಗೆ ಸಂಬಂಧಿಸಿದ ವಸ್ತು, ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್‌ಮೈಟ್ರಿಪ್, ಅಮೆಜಾನ್, ಬುಕ್‌ಮೈಶೋ, ಮೈಂತ್ರಾ, ಸ್ವಿಗ್ಗಿ, ಜೊಮಾಟೊ ಮತ್ತು ಇತರ ಬ್ರ್ಯಾಂಡ್‌ಗಳಿಂದ ವಿಶೇಷ ಕೊಡುಗೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ದೀಪಾವಳಿ ಹಬ್ಬದ ಋತುವಿನಲ್ಲಿ ಬ್ಯಾಂಕ್‌ ʼಉಮಾಗ್ ವಿತ್ ಬಿಒಬಿʼ ಎಂಬ ಅಭಿಯಾನ ಆರಂಭಿಸಿದ್ದು, ಇದರ ಅಡಿಯಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಗ್ರಾಹಕರಿಗೆ ಅನುವು ಮಾಡಿಕೊಡಲಾಗಿದೆ. ಖಾತೆಯಲ್ಲಿ ಬ್ಯಾಲೆನ್ಸ್‌ ಇಲ್ಲ ಎಂದು ಚಿಂತೆ ಮಾಡುವ ಅಗತ್ಯ ಗ್ರಾಹಕರಿಗೆ ಇರೋದಿಲ್ಲ ಎಂದು ಬ್ಯಾಂಕ್‌ ಹೇಳಿದೆ. ಶೂನ್ಯ ಉಳಿತಾಯ ಖಾತೆ ಜೊತೆ ಬ್ಯಾಂಕ್‌ ಜೀವಿತಾವಧಿವರೆಗೆ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ ಸೌಲಭ್ಯ ಕೂಡ ದೊರೆಯಲಿದೆ. ಹೀಗಾಗಿ, ನೀವು ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಬ್ಯಾಲೆನ್ಸ್‌ ಹೊಂದಿರಬೇಕು. ಗ್ರಾಹಕರು ಅರ್ಹರಾಗಿದ್ದರೆ ಬ್ಯಾಂಕ್‌ ಅವರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡಲಿದ್ದು, ಇದರಲ್ಲಿ ಹಬ್ಬದ ಕೊಡುಗೆಗಳನ್ನು ನೀಡಲಾಗುತ್ತದೆ.

 

ಇದನ್ನು ಓದಿ: Dakshina Kannada KSRTC: 60 ಮಂದಿ ಹಿಡಿಸೋ ಬಸ್ಸನ್ನು ಏರಿದ್ದು ಬರೋಬ್ಬರಿ 150 ಮಂದಿ !! ಡ್ರೈವರ್ ಮಾಡಿದ್ದೇನು ಗೊತ್ತಾ ?!

You may also like

Leave a Comment