Canara Bank: ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದ್ದು ತನ್ನ ಎಲ್ಲಾ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕಕ್ಕೆ ವಿನಾಯಿತಿ ನೀಡಿದೆ.
ಹೌದು, ಎಲ್ಲಾ ಬ್ಯಾಂಕ್ಗಳಂತೆ ಕೆನರಾ ಬ್ಯಾಂಕಿನಲ್ಲೂ ಉಳಿತಾಯ ಖಾತೆ, ವೇತನ ಖಾತೆ, ಅನಿವಾಸಿ ಭಾರತೀಯ (ಎನ್‌ಆರ್‌ಐ) ಖಾತೆ ಸೇರಿ ಎಲ್ಲಾ ರೀತಿಯ ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಕನಿಷ್ಠ ತಿಂಗಳ ಮೊತ್ತವನ್ನು (ಎಎಂಬಿ) ಕಾಯ್ದುಕೊಳ್ಳಬೇಕಿತ್ತು. ಈ ನಿಯಮ ಪಾಲಿಸದಿದ್ದರೆ ದಂಡ ಶುಲ್ಕ ವಿಧಿಸಲಾಗುತ್ತಿತ್ತು. ಅದರೀಗ ಈ ದಂಡ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಬ್ಯಾಂಕ್ ಘೋಷಿಸಿದೆ.
ಈ ಕುರಿತಾಗಿ ಬ್ಯಾಂಕ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು “ಜೂನ್ 1, 2025 ರಿಂದ, ಕೆನರಾ ಬ್ಯಾಂಕಿನ ಯಾವುದೇ ಉಳಿತಾಯ ಖಾತೆದಾರರು ತಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದಕ್ಕಾಗಿ ದಂಡ ವಿಧಿಸಲಾಗುವುದಿಲ್ಲ. ಇದು ಎಲ್ಲಾ ಗ್ರಾಹಕರಿಗೆ ನಿಜವಾಗಿಯೂ ಶೂನ್ಯ ಉಳಿತಾಯ ಖಾತೆಯನ್ನು ನೀಡುವತ್ತ ಬದಲಾವಣೆಯಾಗಿದೆ” ಎಂದು ಹೇಳಲಾಗಿದೆ.
