Home » Mangaluru: ಕರಾವಳಿ ಜನತೆಗೆ ಗುಡ್ ನ್ಯೂಸ್, ಮಂಗಳೂರು-ಸಿಂಗಪುರ ನೇರ ವಿಮಾನ ಹಾರಾಟ ; ಎಂದಿನಿಂದ ಆರಂಭ ?

Mangaluru: ಕರಾವಳಿ ಜನತೆಗೆ ಗುಡ್ ನ್ಯೂಸ್, ಮಂಗಳೂರು-ಸಿಂಗಪುರ ನೇರ ವಿಮಾನ ಹಾರಾಟ ; ಎಂದಿನಿಂದ ಆರಂಭ ?

0 comments

Mangaluru: ಹೊಸ ವರ್ಷದೊಂದಿಗೆ ಎರಡು ವಿಮಾನಗಳು ಸಂಚರಿಸಲಿವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೌದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರಿನಿಂದ (Mangaluru) ಸಿಂಗಪುರಕ್ಕೆ ವಿಮಾನಯಾನ ಪ್ರಾರಂಭಿಸಲಿದೆ.

ಜನರ ಬಹುವರ್ಷಗಳ ಈ ಬೇಡಿಕೆಯ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಸಿಂಗಪುರಕ್ಕೆ ನೇರ ವಿಮಾನ ಸಂಪರ್ಕ ವ್ಯವಸ್ಥೆಯು ಕರಾವಳಿ ಮತ್ತು ಆಗ್ನೇಯ ಏಷ್ಯಾ ನಡುವಿನ ವ್ಯಾಪಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ಸಂಬಂಧ ವೃದ್ಧಿಗೆ ಸಹಕಾರಿಯಾಗಲಿದೆ. ಸಿಂಗಪುರದಲ್ಲಿರುವ ಕರಾವಳಿಯ ಮೂಲ ನಿವಾಸಿಗಳು, ತಮ್ಮ ಮೂಲ ನೆಲೆಗೆ ಮರಳುವಂತಾಗಬೇಕು ಮತ್ತು ಈ ನೆಲದಲ್ಲಿ ಹೂಡಿಕೆ ಮಾಡಲು ಮುಂದಾಗಬೇಕು ಎಂದು ಅವರು ವಿನಂತಿಸಿದ್ದಾರೆ.

You may also like

Leave a Comment