LPG gas price: ಮೇ ತಿಂಗಳ ಮೊದಲ ದಿನವೇ ಎಲ್ ಪಿಜಿ ಗ್ಯಾಸ್ ಗಳ ಬೆಲೆ (LPG gas price) 17 ರೂಪಾಯಿ ನಷ್ಟು ಕಡಿಮೆಯಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿ ಹಾಗು ಕೋಲ್ಕತ್ತಾದಲ್ಲಿ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಸುಮಾರು 17 ರೂಪಾಯಿ ನಷ್ಟು ಇಳಿಕೆ ಮಾಡಲಾಗಿದ್ದು, ಈ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಇನ್ನೂ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈ ಹಿಂದೆ 1868.50 ರೂ.ಗಳಿತ್ತು ಆದರೆ ಇದೀಗ 1851.50 ರೂ. ಗಳಷ್ಟಾಗಿದೆ. ಇನ್ನು ಮುಂಬೈನಲ್ಲಿ 1713.50 ರೂ.ಗಳಿತ್ತು ಇಂದಿನಿಂದ 1699 ರೂ. ಆಗಿದೆ ಚೆನ್ನೈನಲ್ಲಿ 1921.50 ಈಗ 1906.50 ರೂ.ಗಳಾಗಿದೆ. ಈಗ ದೆಹಲಿಯಲ್ಲಿ 1747.50 ರೂ.ಗೆ ಲಭ್ಯವಿರುತ್ತದೆ.
ಉಳಿದಂತೆ ದೇಶೀಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 853 ರೂ.ಗಳಿಗೆ, ಕೋಲ್ಕತ್ತಾದಲ್ಲಿ 879 ರೂ.ಗಳಿಗೆ, ಮುಂಬೈನಲ್ಲಿ 852.50 ರೂ.ಗಳಿಗೆ ಮತ್ತು ಚೆನ್ನೈನಲ್ಲಿ 868.50 ರೂ.ಗಳಿಗೆ ಲಭ್ಯವಿರುತ್ತದೆ.
