Home » EPFO withdrawal: ಇಪಿಎಫ್‌ಒ ಚಂದದಾರರಿಗೆ ಸಿಹಿ ಸುದ್ದಿ! PF ಹಣ ಪಡೆಯುವ ಮಿತಿ ಏರಿಕೆ!

EPFO withdrawal: ಇಪಿಎಫ್‌ಒ ಚಂದದಾರರಿಗೆ ಸಿಹಿ ಸುದ್ದಿ! PF ಹಣ ಪಡೆಯುವ ಮಿತಿ ಏರಿಕೆ!

by ಹೊಸಕನ್ನಡ
0 comments

EPFO withdrawal: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಚಂದಾದಾರರು ಇನ್ನು ಮುಂದೆ ತಮ್ಮ ಖಾತೆಗಳಿಂದ 1 ಲಕ್ಷ ರೂ. ವರೆಗೆ ಹಿಂಪಡೆಯಬಹುದು. ಈ ಹಿಂದೆ ಈ ಮಿತಿ 50,000 ರೂ. ಆಗಿತ್ತು. ಇದೀಗ ಕಾರ್ಮಿಕ ಸಚಿವಾಲಯವು ಇಪಿಎಫ್‌ಒ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

ಹೌದು, ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಈ ಪ್ರಕಟಣೆ ಹೊರಡಿಸಿದ್ದಾರೆ. ಸರ್ಕಾರವು ಪಿಎಫ್ ಹಿಂಪಡೆಯುವ ಮಿತಿಯನ್ನು ಈಗ ಒಂದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಇದರಿಂದ ನಿವೃತ್ತಿ ಉಳಿತಾಯ ನಿರ್ವಾಹಕರಿಗೆ ಇದರಿಂದ ಪ್ರಯೋಜನವಾಗಲಿದೆ.

ಪ್ರಸ್ತುತ ‘ಇಪಿಎಫ್‌ಒ ವಿಡ್ರೋ (EPFO withdrawal) ಗಳತ್ತ ಹೆಚ್ಚಿನ ಜನರು ಒಲವು ತೋರುತ್ತಿದ್ದಾರೆ. ಮದುವೆ, ವೈದ್ಯಕೀಯ ಚಿಕಿತ್ಸೆ ಮುಂತಾದ ವೆಚ್ಚಗಳನ್ನು ನಿಭಾಯಿಸಲು ಈ ಉಳಿತಾಯದಿಂದ ಹಣವನ್ನು ಹಿಂಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಆದ್ದರಿಂದ ಹಿಂಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ’ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

You may also like

Leave a Comment