Home » ‘ಬಗರ್ ಹುಕುಂ’ ಜಮೀನುಗಳಲ್ಲಿ ಸಾಗುವಳಿ ಮಾಡುವ ರೈತರಿಗೆ ಸಿಹಿಸುದ್ದಿ!!!

‘ಬಗರ್ ಹುಕುಂ’ ಜಮೀನುಗಳಲ್ಲಿ ಸಾಗುವಳಿ ಮಾಡುವ ರೈತರಿಗೆ ಸಿಹಿಸುದ್ದಿ!!!

by Mallika
0 comments

ಬಗರ್ ಹುಕುಂ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಶೀಘ್ರವೇ ಜಮೀನು ಮಂಜೂರಾತಿಗೆ ಸುಗ್ರೀವಾಜ್ಞೆ ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಅಕ್ಟೋಬರ್ 11 ರಂದು ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಬಗ‌ರ್ ಹುಕುಂ ಸಾಗುವಳಿ ಮಂಜೂರಾತಿ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಈ ಮೂಲಕ ಕಾನು, ಸೊಪ್ಪಿನ ಬೆಟ್ಟ, ಸರ್ಕಾರಿ ಕಾನು, ಗೋಮಾಳ ಸೇರಿದಂತೆ ಮತ್ತಿತರ ಕಂದಾಯ ಜಮೀನುಗಳ ಮಂಜೂರಾತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ

You may also like

Leave a Comment