Home » ರಾಜ್ಯ ಸರಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ

ರಾಜ್ಯ ಸರಕಾರಿ ನೌಕರರೇ ನಿಮಗೊಂದು ಸಿಹಿ ಸುದ್ದಿ

0 comments

ಹೊಸ ವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಮಾಲ್ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದ್ದು, ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ಜೊತೆಗೆ ಬಂಪರ್ ಆಫರ್ ಎಂಬಂತೆ ಉದ್ಯೋಗಿಗಳಿಗೆ ಫೆಸ್ಟಿವಲ್ ಬೋನಸ್ ದೇಶದ ಇತರೆ ರಾಜ್ಯಗಳಲ್ಲಿ 10,000 ರೂಪಾಯಿಗಳಿದ್ದರೆ ಕರ್ನಾಟಕದಲ್ಲಿ 25,000 ರೂಪಾಯಿ ನೀಡಲಾಗುತ್ತದೆ.

ಈ ಕುರಿತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರು ಸಾಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, , ಶಿವಮೊಗ್ಗದಲ್ಲಿ 22 ಕೋಟಿ ರೂಪಾಯಿ ಅನುದಾನದಲ್ಲಿ ಈಗಾಗಲೇ ಬೃಹತ್ ಭವನ ನಿರ್ಮಾಣವಾಗುತ್ತಿದ್ದು, ಇತರ ಜಿಲ್ಲೆಗಳಲ್ಲಿಯೂ ಇಂತಹ ಮಾಲ್ ತೆರೆಯಲು 200 ಕೋಟಿ ರೂಪಾಯಿಗಳ ಯೋಜನೆ ರೂಪಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಸಿ.ಎಸ್ ಷಡಾಕ್ಷರಿಯವರು ಹೇಳಿದ್ದಾರೆ.

You may also like

Leave a Comment