Home » KEA: 2023, 2024 ಮತ್ತು 2025ರ KSET ಪಾಸ್ ಆದವರಿಗೆ ಗುಡ್ ನ್ಯೂಸ್- KEA ಯಿಂದ ಮಹತ್ವದ ಘೋಷಣೆ

KEA: 2023, 2024 ಮತ್ತು 2025ರ KSET ಪಾಸ್ ಆದವರಿಗೆ ಗುಡ್ ನ್ಯೂಸ್- KEA ಯಿಂದ ಮಹತ್ವದ ಘೋಷಣೆ

0 comments

KEA: 2023, 2024, 2025ರಲ್ಲಿ ಕೆಸೆಟ್ ಪರೀಕ್ಷೆ ಪಾಸ್ ಆಗಿರುವಂತ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುಡ್ ನ್ಯೂಸ್ ನೀಡಿದೆ. 

ಹೌದು, 2023, 2024, 2025ರಲ್ಲಿ ಕೆ-ಸೆಟ್ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅನೇಕರು ನಾನಾ ಕಾರಾಣಗಳಿಂದ ದಾಖಲೆ ಪರಿಶೀಲನೆಗೆ ಹಾಜರಾಗಿರುವುದಿಲ್ಲ. ಅಂತಹವರ ಅನುಕೂಲಕ್ಕೆ ಡಿ.10ರಿಂದ 12ರವರೆಗೆ ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದಂತ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, KSET: 2023, 2024 ಮತ್ತು 2025ರ ಕೆ-ಸೆಟ್ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅನೇಕರು ನಾನಾ ಕಾರಾಣಗಳಿಂದ ದಾಖಲೆ ಪರಿಶೀಲನೆಗೆ ಹಾಜರಾಗಿರುವುದಿಲ್ಲ. ಅಂತಹವರ ಅನುಕೂಲಕ್ಕೆ ಡಿ.10 ಮತ್ತು 11ರಂದು ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

ಡಿ.10, 11ರಂದು ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿ ಇದ್ದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ KEA ವೆಬ್ ಸೈಟ್ ನೋಡಿ ಎಂಬುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ

You may also like