Home » Traffic Fine: ಟ್ರಾಫಿಕ್ ಫೈನ್ ಕಟ್ಟದ ವಾಹನ ಸವಾರರಿಗೆ ಗುಡ್ ನ್ಯೂಸ್ – 50% ರಿಯಾಯಿತಿ ಘೋಷಿಸಿದ ಸರ್ಕಾರ

Traffic Fine: ಟ್ರಾಫಿಕ್ ಫೈನ್ ಕಟ್ಟದ ವಾಹನ ಸವಾರರಿಗೆ ಗುಡ್ ನ್ಯೂಸ್ – 50% ರಿಯಾಯಿತಿ ಘೋಷಿಸಿದ ಸರ್ಕಾರ

0 comments

Traffic Fine: ಸರ್ಕಾರ ವಾಹನ ಚಲಾವಣೆ ವಿಚಾರದಲ್ಲಿ ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೊಳಿಸಿದರು ಕೂಡ ಕೆಲವರು ಕ್ಯಾರೆ ಎನ್ನದೆ ಬೇಕಾಬಿಟ್ಟಿ ವಾಹನ ಚಲಾವಣೆ ಮಾಡುತ್ತಾರೆ. ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡುತ್ತಾರೆ. ಬೇಳೆ ನಿಯಮದಂತೆ ಪೊಲೀಸರು ದಂಡ ವಿಧಿಸಿದರು ಕೂಡ ಅನೇಕರು ಅದನ್ನು ಕಟ್ಟದೇ ಬಾಕಿ ಉಳಿಸಿಕೊಂಡು ದೊಡ್ಡಪಟ್ಟಿಯನ್ನೇ ಇರಿಸಿಕೊಂಡಿದ್ದಾರೆ. ಆದರೀಗ ಜನರಿಗೆ ಸದ್ಯಕ್ಕೆ ಗುಡ್‌ನ್ಯೂಸ್‌ (Good News) ಸಿಕ್ಕಿದೆ. ಹೌದು ಸಂಚಾರಿ ಪೊಲೀಸರು ಈಗ ಭರ್ಜರಿ ಡಿಸ್ಕೌಂಟ್‌ (Discount) ಕೊಟ್ಟಿದ್ದಾರೆ.

ಸಂಚಾರ ನಿಯಮ ಉಲ್ಲಂ ಸಿದ ವಾಹನ ಸವಾರರಿಗೆ ರಾಜ್ಯ ಸರಕಾರವು ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಬಂಪರ್‌ ಕೊಡುಗೆ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕಾಗಿ ಶೇ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶವನ್ನು ಮತ್ತೂಮ್ಮೆ ನೀಡಿದೆ.

ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಶೇ. 50 ರಷ್ಟು ದಂಡ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆಬ್ರವರಿ 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಿಗ್ನಲ್‌ ಉಲ್ಲಂಘನೆ ಮಾಡಿರುವವರಿಗೆ ಹಾಗೂ ಮಿತಿ ಮೀರಿದ ವೇಗದ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಬಳಕೆ ಮಾಡದಿರುವುದು, ಗಾಡಿ ಚಾಲನೆ ಮಾಡುವಾಗ ಮೊಬೈಲ್‌ ಫೋನ್‌ ಬಳಕೆ ಮಾಡುವುದು ಹಾಗೂ ನೋ ಪಾರ್ಕಿಂಗ್‌ ಜಾಗದಲ್ಲಿ ಪಾರ್ಕ್‌ ಮಾಡುವುದು ಹೀಗೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದವರಿಗೆ ಈ ಡಿಸ್ಕೌಂಟ್‌ ಅನ್ವಯವಾಗುತ್ತದೆ.

ದಂಡ ಪಾವತಿ ಮಾಡಲು ಕರ್ನಾಟಕ ಒನ್ ವೆಬ್ ಸೈಟ್ ಹಾಗೂ ಪೇಟಿಎಂ ಬಳಕೆ ಮಾಡಬಹುದು, ಅಲ್ಲದೇ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿ ಸಹ ಮಾಡಬಹುದಾಗಿದೆ.

Bengaluru : ಧರ್ಮಸ್ಥಳ ಪ್ರಕರಣ – ಬೆಂಗಳೂರಲ್ಲಿ ಸಾಹಿತಿಗಳು, ಚಿಂತಕರಿಂದ ಸಭೆ!!

You may also like