Home » Samantha: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್! ಒಲಿದು ಬಂತು ಆಫರ್ ಮೇಲೆ ಆಫರ್

Samantha: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್! ಒಲಿದು ಬಂತು ಆಫರ್ ಮೇಲೆ ಆಫರ್

1 comment

Samantha: ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಚಲನಚಿತ್ರ ಜಗತ್ತಿನಲ್ಲಿ ಪ್ಯಾನ್ ಇಂಡಿಯಾ ಎಂದು ಜನಪ್ರಿಯರಾಗಿದ್ದಾರೆ. ಕೆಲ ಸಮಯದಿಂದ ಸಿನಿಮಾದಿಂದ ದೂರವಿದ್ದರೂ ಕೂಡಾ ಅವಕಾಶ ಅವರನ್ನು ಹುಡುಕಿ ಹೋಗುತ್ತಿದೆ. ಅಂತೆಯೇ ಸಮಂತಾ (Samantha) ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಅದರಲ್ಲೂ ನಾಗ ಚೈತನ್ಯ ಜೊತೆಗೆ ಮದುವೆ ಮುರಿದಮೇಲೆ ಆಫರ್ ಮೇಲೆ ಆಫರ್ ಒಲಿದು ಬರುತ್ತಿದೆ ಅಂದರೆ ತಪ್ಪಾಗಲಾರದು.

ಸೌತ್ ನಟಿ ಸಮಂತಾ ಋತುಪ್ರಭು (Samantha) ಈಗಾಗಲೇ ‘ಸಿಟಾಡೆಲ್’ ಬಾಲಿವುಡ್ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದರು ಇದೀಗ ಅದರ ಬೆನ್ನಲ್ಲೇ ‘ಆಶಿಕಿ 2’ ಆದಿತ್ಯಾ ರಾಯ್ ಕಪೂರ್ (Aditya Rou Kapoor) ಜೊತೆ ನಟನೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಟ್ಟಿನಲ್ಲಿ ಮೊದಲ ಬಾರಿಗೆ ಆದಿತ್ಯಾ ರಾಯ್ ಕಪೂರ್ ಮತ್ತು ಸಮಂತಾ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಯೋಜನೆ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

ಇನ್ನು ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ (Kushi) ಸಿನಿಮಾದ ರಿಲೀಸ್ ಬಳಿಕ ‘ಸಿಟಾಡೆಲ್ ಹನಿ ಬನಿ’ ವೆಬ್ ಸರಣಿ ಇದೇ ನವೆಂಬರ್‌ನಲ್ಲಿ ರಿಲೀಸ್ ಆಗಲಿದ್ದು, ಇದೊಂದು ಸಂತೋಷದ ವಿಚಾರವಾಗಿದೆ. ಅಲ್ಲದೇ ರಾಜ್ ಮತ್ತು ಡಿಕೆ ನಿರ್ಮಾಣದ ಹೊಸ ವೆಬ್ ಸರಣಿ ‘ರಕ್ತ ಬ್ರಹ್ಮಾಂಡ್’ದಲ್ಲಿ ಸಮಂತಾ ಋತುಪ್ರಭು ನಾಯಕಿಯಾಗಿ ನಟಿಸುತ್ತಿದ್ದಾರೆ.

You may also like

Leave a Comment