Home » ಮನೆ ಕಟ್ಟುವವರಿಗೆ ಇಲ್ಲಿದೆ ಸಿಹಿ ಸುದ್ದಿ !

ಮನೆ ಕಟ್ಟುವವರಿಗೆ ಇಲ್ಲಿದೆ ಸಿಹಿ ಸುದ್ದಿ !

0 comments

ಹಣದುಬ್ಬರ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಲು ಸರ್ಕಾರ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಈಗಾಗಲೇ ಅತ್ಯಂತ ಗರಿಷ್ಠ ಜಿ.ಎಸ್.ಟಿ. ತೆರಿಗೆ ಸ್ಲಾಬ್ ಶೇಕಡ 28ರ ದರದ ಸರಕುಗಳ ಪಟ್ಟಿಯಲ್ಲಿ ಸಿಮೆಂಟ್ ಇದ್ದು, ಈ ಕುರಿತಂತೆ ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಬೇಕು ಎನ್ನುವ ಉದ್ಯಮದ ಬೇಡಿಕೆಯನ್ನು ಪರಿಗಣಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಾಹಿತಿ ನೀಡಿದ್ದರು. ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಿಮೆಂಟ್ ಮೇಲಿನ ತೆರಿಗೆ ತಗ್ಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಸದ್ಯ ಜಿ.ಎಸ್.ಟಿ. ಮಂಡಳಿ ಸಭೆ ಫೆಬ್ರವರಿ 18 ರಂದು ನಡೆಯಲಿದ್ದು, ಸಿಮೆಂಟ್ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಮಂಡಳಿಯ ಸಭೆಯಲ್ಲಿ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡಲ್ಲಿ ಸಿಮೆಂಟ್ ದರ ಶೇಕಡ 10 ರಷ್ಟು ಕಡಿಮೆಯಾಗಲಿದೆ. ಪ್ರತಿ ಚೀಲಕ್ಕೆ 35 ರಿಂದ 40 ರೂಪಾಯಿ ಕಡಿಮೆ ಆಗಬಹುದು ಎಂಬ ಮಾಹಿತಿ ಇದೆ.

You may also like

Leave a Comment